ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಖಂಡಿಸಿ ಪ್ರತಿಭಟನಾ ಜಾಥಾ
ದಾವಣಗೆರೆ, ಜೂ.27- ಭಾರತ ಮತ್ತು ಚೀನಾ ನಡುವಿನ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಲ್ಲದೇ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಜಾಥಾ ನಡೆಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಮತ್ತು ಮುಖಂಡರ ನೇತೃತ್ವದಲ್ಲಿ ಜಮಾಯಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು, ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಮುಖೇನ ಗೌರವ ನಮನ ಸಲ್ಲಿಸಿದರು. ನಂತರ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ವಿರೋಧಿಸಿ, ಶ್ರೀ ಜಯದೇವ ಮುರುಘ ರಾಜೇಂದ್ರ ವೃತ್ತದವರೆಗೆ ಪ್ರತಿಭಟನಾ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೈಯದ್ ಖಾಲೀದ್ ಅಹ್ಮದ್, ಮೈನುದ್ದೀನ್, ಉಪಾಧ್ಯಕ್ಷ ಪ್ರವೀಣ್ ಹುಲ್ಮನಿ, ಹರೀಶ್, ಸೈಯದ್ ಕಬೀರ್, ಸಾಗರ್, ಶಿವಕುಮಾರ್, ಶಿವರಾಜ್, ಮಧುಗೌಡ, ಅಜಮ್ ಉಲ್ಲಾ, ಚಂದ್ರು, ಸದ್ದಾಂ, ಜಮೀರಾ ನವೀದ್, ರಂಜಿತ್, ಜಮೀರ್, ಸಮಿ, ಫಹೀಮುದ್ದೀನ್, ಸುಭಾನ್ ಸಾಬ್, ಸಂತೋಷ್, ವಿನಯ್, ಪ್ರವೀಣ್ ನಿಟ್ಟುವಳ್ಳಿ, ಎನ್ ಎಸ್ ಯುಐ ಮುಜಾಹಿದ್ ಮತ್ತು ಕಾರ್ಯಕರ್ತರು ಇದ್ದರು.