ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಜಗಳೂರು, ಜೂ.27- ದೇಶದಲ್ಲಿ ಕೊರೊನಾ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್‌  ಆರೋಪಿಸಿದರು.

ತೈಲಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟ ನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೃಂದಾವನ ಪೆಟ್ರೋಲ್ ಬಂಕ್‌ನಿಂದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ವರೆಗೆ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ  ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ  ಅವರು ಮಾತ‌ನಾಡಿದರು.

ಗ್ರಾಮೀಣ ಭಾಗದಲ್ಲಿ ಕೆಲಸವಿಲ್ಲದೆ ನಿರು ದ್ಯೋಗ ತಾಂಡವವಾಡುತ್ತಿದೆ. ಸಾಕಷ್ಟು ಯುವ ಕರು, ಮಹಿಳೆಯರು ಉದ್ಯೋಗದಿಂದ ವಿಮು ಖರಾಗಿದ್ದು, ಕೇಂದ್ರ ಸರ್ಕಾರ ನೆರವಿಗೆ ಬಾರದೆ ಬೀದಿಗೆ ತಳ್ಳಿದೆ,  20 ಲಕ್ಷ ಕೋಟಿ ಪ್ಯಾಕೇಜ್ ಯಾರಿಗೆ ತಲುಪಿದೆ? ಎಂದು ಅವರು ಪ್ರಶ್ನಿಸಿದರು. ಅಂತರರಾಷ್ಟೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದೆ. ವಿದೇಶಗಳಲ್ಲಿ ಪೆಟ್ರೋಲ್ ಡೀಸೆಲ್ ದರ ಕಡಿಮೆ ಇದೆ. ಆದರೆ, ಭಾರತ ದೇಶದಲ್ಲಿ ಅಭಿವೃದ್ಧಿ ಮಾಡಿರುವುದಾಗಿ ಹೇಳುವ ಕೇಂದ್ರ ಸರ್ಕಾರ,  ಬೆಲೆ ಇಳಿಸದೆ  ಜನರಿಗೆ ವಂಚಿಸಿದೆ ಎಂದರು. 

ಕೊರೊನಾ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. – ಹೆಚ್.ಪಿ.ರಾಜೇಶ್‌, ಮಾಜಿ ಶಾಸಕರು

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿಗೌಡ ಮಾತನಾಡಿ, ನೂರು ಸುಳ್ಳುಗಳನ್ನು ಹೇಳುವ ಮೂಲಕ ಮುಗ್ಧ ಜನರನ್ನು ವಂಚಿಸುತ್ತಿರುವ ಬಿಜೆಪಿ ಸರ್ಕಾರ ಕಾರ್ಪೊರೇಟ್ ಕಂಪನಿಗಳ  ಪರವಾಗಿದೆಯೇ ಹೊರತು ರೈತರ, ಜನಸಾಮಾನ್ಯರ ಪರವಾಗಿಲ್ಲ ಎಂದು ಆರೋಪಿಸಿದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್ ಮಾತನಾಡಿ  ಸರಣಿ ಸುಳ್ಳುಗಳಿಂದ ಜನರನ್ನು ವಂಚಿಸುತ್ತಿರುವ ಕೇಂದ್ರ, ರಾಜ್ಯ ಸರ್ಕಾರಗಳು ಬಹಳ ದಿನ ಇರುವುದಿಲ್ಲ.  ಸತ್ಯ ಬಹಿರಂಗವಾಗಲೇ ಬೇಕಿದೆ.  ಅಸಂಘಟಿತ ಕಾರ್ಮಿಕರು , ಆಟೋ ಟ್ಯಾಕ್ಸಿ ಹಾಗು ವೃತ್ತಿಗಾರಿಕೆ ಮಾಡುವ ಸಂಕಷ್ಟದಲ್ಲಿರುವ ಕುಟುಂಬ ಗಳಿಗೆ ನೆರವಿನ ಆಶ್ವಾಸನೆ ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ, ಅವರುಗಳನ್ನು ನಡುನೀರಿನಲ್ಲಿ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರ ತೈಲಬೆಲೆಯನ್ನು ತಕ್ಷಣವೇ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಜಿಲ್ಲಾ ಎಸ್ಸಿ ಉಪಾಧ್ಯಕ್ಷ ಶಂಭುಲಿಂಗಪ್ಪ, ಎಸ್ಸಿ ಘಟಕ ಅಧ್ಯಕ್ಷ ವೆಂಕಟೇಶ್, ಎಸ್ಟಿ ಘಟಕ ಅಧ್ಯಕ್ಷ ಬಿ ಲೋಕೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಅಜಾಮುಲ್ಲಾ , ತಾ.ಪಂ. ಸದಸ್ಯ ಕುಬೇಂದ್ರಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ರವಿಕುಮಾರ್,  ಖಲೀಲ್ ಅಹಮದ್,  ಮಾಜಿ ಅಧ್ಯಕ್ಷ ಅಪ್ಸರ ಮಂಜು, ಮುಖಂಡರಾದ ಪ್ರಕಾಶರೆಡ್ಡಿ, ವೀರಣ್ಣ ಪಾಟೀಲ್, ಎಂ.ಎನ್ ಹಾಲಸ್ವಾಮಿ, ಬಂಗಾರಪ್ಪ ಪ್ರಹ್ಲಾದ್ ರೆಡ್ಡಿ, ಗೋಡೆ ಪ್ರಕಾಶ್, ಅಹಮದ್ ಆಲಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!