ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ
ಹೊನ್ನಾಳಿ, ಜೂ. 27- ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಯುವ ಸಂಘಟಕರಿಗೆ ಪ್ರೇರಣೆಯಾಗಲಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಪಟ್ಟಣದ ಗುರುಭವನದಲ್ಲಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿ ಯಿಂದ ಇಂದು ಆಯೋಜಿಸಲಾಗಿದ್ದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಪ್ರತಿಜ್ಞಾ ಕಾರ್ಯಕ್ರಮದ ಅಂಗವಾಗಿ ಸಾಮಾ ಜಿಕ ಜಾಲತಾಣದ ಪೂರ್ವಸಿದ್ಧತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರ-ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವುದ ರಿಂದ ರಾಜ್ಯ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಜನರು ಹೆಚ್ಚಾಗಿ ಸೇರಲು ಸಾಧ್ಯವಾಗದ ಕಾರಣ, ತಾಲ್ಲೂಕಿನ 47 ಗ್ರಾ.ಪಂ. ಹಾಗೂ ಪ.ಪಂ. 2 ಕಡೆ ಲೈವ್ ಕಾರ್ಯ ಕ್ರಮವನ್ನು ತಪ್ಪದೇ ನೋಡುವ ಮೂಲಕ ಎಲ್ಲಾ ಯುವಕರಿಗೆ, ಪಕ್ಷದ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಪ್ರೇರಣೆಯಾಗಲಿದ್ದು. ಈ ಕಾರ್ಯಕ್ರಮವನ್ನು ಅವಲೋಕಿಸಿ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಆಡಳಿತದ ವಿರುದ್ಧ ಹೋರಾಟ ಮಾಡಿ, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಸೋಷಿಯಲ್ ಮೀಡಿಯಾ ಸಂಯೋಜಕರಾದ ಸೌಂಗಧಿಕಾ ರಘುನಾಥ್, ಜಿಲ್ಲಾಧ್ಯಕ್ಷ ಗೋವಿಂದ ಹಾಲೇಕಲ್, ಜಿ.ಪಂ. ಸದಸ್ಯ ದೊಡ್ಡೇರಿ ವಿಶ್ವನಾಥ್, ಮುಖಂಡರಾದ ಬಿ.ಸಿದ್ದಪ್ಪ, ಡಾ. ಈಶ್ವರನಾಯ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಸ್ವೆಹಳ್ಳಿ ಬ್ಲಾಕ್ ವೀಕ್ಷಕ ಮೋಹನ್, ರವಿಕುಮಾರ್, ಪಕ್ಷದ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಸಾಸ್ವೆಹಳ್ಳಿ ಘಟಕದ ಅಧ್ಯಕ್ಷ ಹುಣಸಘಟ್ಟ ಹೆಚ್.ಎ. ಗದ್ದಿಗೇಶ್, ತಾ.ಪಂ. ಸದಸ್ಯರಾದ ಪೀರ್ಯಾನಾಯ್ಕ, ವಿಜಯಕುಮಾರ, ಅಬಿದ್ ಅಲಿಖಾನ್, ಸುಲೇಮಾನ್, ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಉಮಾಪತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಮಧುಗೌಡ, ಉಪಾಧ್ಯಕ್ಷ ರಂಜಿತ್, ಮುಕ್ತೇನಹಳ್ಳಿ ಮರಳುಸಿದ್ದಪ್ಪ, ಯಕ್ಕನಹಳ್ಳಿ ಕರಿಬಸಪ್ಪ, ಚಿಕ್ಕಪ್ಪ ಮತ್ತಿತರರು ಉಪಸ್ಥಿತರಿದ್ದರು.