ತಣಿಗೆರೆ : ‘ಕವನ ಕುಸುಮ’ ಪುಸ್ತಕ ಬಿಡುಗಡೆ

ಸಂತೇಬೆನ್ನೂರು, ಜೂ.27- ತಂದೆ ಬರೆದಿಟ್ಟಿದ್ದ ಕವನಗಳನ್ನು ಅವರ ಮಕ್ಕಳು ಕವನ ಸಂಕಲನವನ್ನಾಗಿ ಹೊರತರುವ ಮೂಲಕ ಮಾದರಿಯಾಗಿದ್ದಾರೆ ಎಂದು ಹದಡಿಯ ಚಂದ್ರಗಿರಿ ಮಠದ ಶ್ರೀ ಸದ್ಗುರು ಮುರಳೀಧರ ಸ್ವಾಮೀಜಿ ಹೇಳಿದರು.

ಇಲ್ಲಿಗೆ ಸಮೀಪದ ತಣಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗುರು ಭಕ್ತರಾಗಿದ್ದ ಚನ್ನಾಪುರದ ದೇವರಮನೆ ಚನ್ನವೀರಪ್ಪನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಚನ್ನವೀರಪ್ಪನವರು ಬರೆದ ಕವನಗಳ `ಕವನ ಕುಸುಮ’ ಪುಸ್ತಕ ಬಿಡುಗಡೆ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು.

ದೇವರಮನೆ ಗುರುವಿನ ಗುಲಾಮ ಎಂಬ ಕಾವ್ಯ ನಾಮ ಹೊಂದಿ ಆ ಮೂಲಕ ಚನ್ನವೀರಪ್ಪನವರು ಸಮಾಜದ ಬಹುಮುಖ ಆಯಾಮಗಳನ್ನು ಕವನಗಳಲ್ಲಿ ಬಿಂಬಿಸಿದ್ದರು. ಅವರು ಬರೆದಿಟ್ಟಿದ್ದ 50 ಕ್ಕೂ ಹೆಚ್ಚು ಕವನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತಂದಿರುವುದು ಒಳ್ಳೆಯ ಕೆಲಸ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ರಾಜವಿದ್ಯಾಶ್ರ ಮದ ಶ್ರೀ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಗುರುವಿನ ಸಾನ್ನಿಧ್ಯ ದಲ್ಲಿ ಭಕ್ತಿ ಸುಧೆ ಹರಿಸಿದ ಚನ್ನ ವೀರಪ್ಪನವರು ಮಹಾನ್‌ ಚೇತ ನವಾಗಿದ್ದು, ಪ್ರಚಾರ ಬಯಸದೆ ಸಮಾಜದ ಕಾಯಕದಲ್ಲಿ ತೊಡಗಿಕೊಂಡಿದ್ದರು ಎಂದರು.

ಸವದತ್ತಿ ಕರೇಕಟ್ಟೆಯ ಶ್ರೀ ಗುರುನಾಥ ಶಾಸ್ತ್ರಿ, ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ. ಎಂ. ಜಯಪ್ಪ, ನಿವೃತ್ತ ಮುಖ್ಯೋ ಪಾಧ್ಯಾಯ ಕೆ. ರಾಜಶೇಖರಪ್ಪ, ಶಿಕ್ಷಕ ಬೆಳ್ಳಿಗನೂಡು ಉಮಾಪತಿ, ಗ್ರಾಮದ ಚಂದ್ರಯ್ಯ, ಗಿರಿಯಾಪುರದ ರುದ್ರಯ್ಯ ಮತ್ತಿತರರು ಚನ್ನವೀರಪ್ಪನವರ ಗುರುಸೇವೆಯನ್ನು ಸ್ಮರಿಸಿದರು.

ಚನ್ನವೀರಪ್ಪನವರ ಪತ್ನಿ ಶ್ರೀಮತಿ ಪ್ರೇಮಮ್ಮ, ಪುತ್ರರಾದ ಸಾಫ್ಟ್‌ವೇರ್‌ ಇಂಜಿನಿಯರ್‌ ಡಿ.ಸಿ. ಕಾಂತೇಶ್‌, ವಕೀಲ ಡಿ.ಸಿ. ಬೀರಲಿಂಗಪ್ಪ, ಪುತ್ರಿ ತ್ರಿವೇದ ಅನಂತರಾಜು ಮತ್ತಿತರರು ಹಾಜರಿದ್ದರು. ಶಿಕ್ಷಕ ಸಿ.ಕೆ. ಕರಿಯಪ್ಪ ಸ್ವಾಗತಿಸಿದರು. ಡಿ.ಕೆ. ಸದಾಶಿವಪ್ಪ ವಂದಿಸಿದರು.

error: Content is protected !!