ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯಬೇಕು

ರಾಣೇಬೆನ್ನೂರು ಶಾಸಕ ಅರುಣಕುಮಾರ ಕಿವಿಮಾತು

ರಾಣೇಬೆನ್ನೂರು, ಜೂ.25- ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸುವ ದಿಟ್ಟ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳು ಎಂದೆಗುಂದದೆ ಧೈರ್ಯದಿಂದ ಪರೀಕ್ಷೆ ಬರೆಯಿರಿ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ನಗರದ ಕೆಎಲ್‍ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸುಕ್ಷೇತ್ರ ದೇವರಗುಡ್ಡದ ಪ್ರಧಾನ ಅರ್ಚಕ ಸಂತೋಷ್ ಭಟ್ಟ ಪೂಜಾರಿ ನೀಡಿದ ಮಾಸ್ಕ್, ನೀರಿನ ಬಾಟಲಿ ಹಾಗೂ ಸ್ಯಾನಿಟೈಸರ್‍ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳು ಕೊರೊನಾ ವೈರಸ್‍ಗೆ ಭಯಪಡುವ ಅಗತ್ಯವಿಲ್ಲ. ಅದಕ್ಕೆ ಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಪರೀಕ್ಷೆಯಲ್ಲಿ ಸಾಮಾಜಿಕ ಅಂತರ, ಎರಡು ಸಲ ಸ್ಯಾನಿಟೈಸರ್ ಬಳಕೆಗೆ ಅವಕಾಶ ಹಾಗೂ ಮಾಸ್ಕ್‌ಗಳನ್ನು ನೀಡಲಾಗಿದ್ದು, ಪರೀಕ್ಷೆಯನ್ನು ಉತ್ತಮವಾಗಿ ಬರೆದು ಉಜ್ವಲ ಭವಿಷ್ಯ ಹೊಂದುವಂತೆ ಆಶಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಸುಕ್ಷೇತ್ರವಾದ ದೇವರಗುಡ್ಡದ ಪ್ರಧಾನ ಆರ್ಚಕ ಸಂತೋಷ ಭಟ್ಟ ಅವರು ಸ್ವಂತ ಹಣದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಶುದ್ಧ ನೀರಿನ ಬಾಟಲಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿರುವುದನ್ನು ಶಾಸಕರು  ಶ್ಲ್ಯಾಘಿಸಿದರು.

ಸಂತೋಷ ಭಟ್ ಪೂಜಾರ ಮಾತನಾಡಿ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಹಾಗೂ ಸಚಿವರು ಪರೀಕ್ಷೆಗೆ ಅವಕಾಶ ನೀಡಿದ್ದು, ಮಕ್ಕಳು ಭಯ ಪಡದೇ ಪರೀಕ್ಷೆ ಬರೆಯಬೇಕು ಎಂದು ಕರೆ ನೀಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಮಲ್ಲಿಕಾರ್ಜುನ ಅಂಗಡಿ, ವಿ.ಪಿ.ಲಿಂಗನಗೌಡ್ರ, ಡಿವೈಎಸ್‍ಪಿ ಟಿ.ವಿ.ಸುರೇಶ್, ನಗರಸಭೆ ಪೌರಾಯುಕ್ತ ಡಾ.ಮಹಾಂತೇಶ್, ಗಿರೀಶ ಪದಕಿ, ಸಿದ್ದಪ್ಪ ಬಾತಿ, ರಾಜು ಮಾಲಾದಾರ, ಹರೀಶ ಹಪ್ಪಣ್ಣನವರ ಸೇರಿದಂತೆ ಮತ್ತಿತರರಿದ್ದರು.

error: Content is protected !!