ಗ್ರಹಣ, ಬ್ರಹ್ಮಾಂಡದಲ್ಲಿ ನಡೆಯುವ ನಿಸರ್ಗದತ್ತ ಕ್ರಿಯೆ : ಮುರುಘಾ ಶರಣರು

ಚಿತ್ರದುರ್ಗ, ಜೂ.21- ಸೂರ್ಯಗ್ರಹಣ, ಚಂದ್ರ ಗ್ರಹಣ ಅಥವಾ ಇಂತಹ ಇನ್ನಿತರೆ ಪ್ರಕ್ರಿಯೆಗಳು ಬ್ರಹ್ಮಾಂಡದಲ್ಲಿ ನಡೆಯುವ ನಿಸರ್ಗದತ್ತವಾದ ಚಲನೆಗ ಳಾಗಿವೆ. ವಿಜ್ಞಾನಿಗಳು ಹೇ ಳಿದ ಹಾಗೆ ಕನ್ನಡಕ ಹಾಕಿ ಕೊಂಡು ನೋಡಿದರೆ ತೊಂದರೆ ಆಗುವುದಿಲ್ಲ. ಸೂರ್ಯಗ್ರಹಣದ ಸಂದರ್ಭದಲ್ಲಿ ಏನೂ ಅಮಂಗಲ ಆಗುವುದಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಶ್ರೀ ಮುರುಘಾ ಮಠದಲ್ಲಿ ಇಂದು ಏರ್ಪಡಿಸಲಾಗಿದ್ದ ಕಂಕಣ ಸೂರ್ಯಗ್ರಹಣವನ್ನು ಸಹಭೋಜನದೊಂದಿಗೆ ವೀಕ್ಷಣೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಜಗ ತ್ತಿನ ದಾರ್ಶನಿಕರು ಅನಿಷ್ಟಗಳನ್ನು ವಿಮೋಚನೆ ಮಾಡಿ ದರು. ಅಸ್ಪೃಶ್ಯತೆ, ದಾಸ್ಯದ ವಿಮೋಚನೆ ಮಾಡಿ ಸಮಾ ನತೆ ತಂದರು. ಅಮಂಗಲ ಸೂರ್ಯ, ಚಂದ್ರ, ನಕ್ಷತ್ರ ತಾರೆಯೊಳಗಿಲ್ಲ. ಅಮಂಗಲವು ಕುತಂತ್ರ, ಕುಬುದ್ಧಿ, ಮಾಡುವವರ ಮೆದುಳಿನಲ್ಲಿದೆ. ಜನರಲ್ಲಿರುವ ಗ್ರಹಣ ಬಿಡಿಸಿ ಆರೋಗ್ಯಪೂರ್ಣ ಸಮಾಜ ಕಟ್ಟೋಣ ಎಂದರು.

ಶ್ರೀ ಬಸವ ನಾಗಿದೇವ ಸ್ವಾಮೀಜಿ, ಶ್ರೀ ಕೇತೇಶ್ವರ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಮಡಿವಾಳ ಗುರುಪೀಠದ ಶ್ರೀ ಮಾಚಿದೇವ ಸ್ವಾಮೀಜಿ, ವಕೀಲರಾದ ರಹಮತ್‍ವುಲ್ಲಾ, ಶೇಷಣ್ಣಕುಮಾರ್, ನಿರಂಜನಮೂರ್ತಿ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ  ಮತ್ತು ಇತರರು ಇದ್ದರು.

ಸೂರ್ಯಗ್ರಹಣವನ್ನು ವೀಕ್ಷಿಸಿದ ನಂತರ ಸಹಪಂಕ್ತಿ ಭೋಜನ ನಡೆಯಿತು.

error: Content is protected !!