ರಾಣೇಬೆನ್ನೂರು, ಜೂ.19- ತಾಲ್ಲೂಕಿನ ಅರೇ ಮಲ್ಲಾಪುರದ ಐತಿಹಾಸಿಕ ಎನ್ನಲಾದ ಕಲ್ಲುಬಾವಿಯನ್ನು ರಿಪೇರಿ ಮಾಡಿ ನವೀಕರಣ ಗೊಳಿಸುವ ಕಾಮಗಾರಿಗೆ ಸ್ಥಳೀಯ ಶರಣ ಬಸವೇಶ್ವರರ ಮಠದ ಡಾ. ಪ್ರಣವಾನಂದ ರಾಮ ಸ್ವಾಮೀಜಿ ನೇತೃತ್ವದಲ್ಲಿ ಶಾಸಕ ಅರುಣಕುಮಾರ್ ಪೂಜಾರ್ ಚಾಲನೆ ನೀಡಿದರು.
ಗ್ರಾಮದ ಹಿರಿಯರು ಹೇಳುವಂತೆ ಈ ಬಾವಿಯಿಂದ ಗ್ರಾಮದ ಎಲ್ಲ ಜನರಿಗೆ ಕುಡಿಯುವ ನೀರು ದೊರೆಯುತ್ತಿತ್ತು. ರಿಪೇರಿ ಆದ ನಂತರ ಇಲ್ಲಿನ ಜನತೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.
ಪಿಡಿಒ ಡಿ.ಬಿ.ಹರಿಜನ ನಾಗಪ್ಪ ನಾಗರಜ್ಜಿ, ಪ್ರಭು ಮುದಿಗೌಡ್ರ, ಬಸಪ್ಪ ಸುರ್ವೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.