ಹಿರಿಯ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಅವರು ಮಂಗಳವಾರ 89 ವರ್ಷಗಳನ್ನು ಪೂರೈಸಿ 90ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಅನೇಕ ಗಣ್ಯರು, ಹಿತೈಷಿಗಳು, ಅಭಿಮಾನಿಗಳು ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು. ಎಸ್ಸೆಸ್ ಅವರ ಇಡೀ ಕುಟುಂಬ ವರ್ಗದ ಎಲ್ಲರೂ ಸೇರಿ ಕೇಕ್ ಕತ್ತರಿಸುವುದರ ಮೂಲಕ ತಮ್ಮ ಮನೆಯ ಯಜಮಾನನಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದರು.
January 7, 2025