ದಾವಣಗೆರೆ, ಜೂ.12- ಕೊರೊನಾದಿಂದ ಉಂಟಾಗಿರುವ ಸಮಯವನ್ನು ಹೊಸ ಟೆಕ್ನಾಲಜಿ ವಿಷಯಗಳನ್ನು ಕಲಿಯುತ್ತಾ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಅವರು ಪ್ರಾಧ್ಯಾಪಕರಿಗೆ ಕಿವಿಮಾತು ಹೇಳಿದರು.
ನಗರದ ಬಾಪೂಜಿ ಇನ್ಸ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ನಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರಿಗೆ ಇಂದು ಏರ್ಪಾಡಾಗಿದ್ದ ಒಂದು ದಿನದ ರಾಷ್ಟ್ರಮಟ್ಟದ ವರ್ಚ್ಯುವಲ್ ಕಾರ್ಯಾಗಾರ `ಡಾಟಾ ಸೈನ್ಸ್ ಮತ್ತು ಇಂಟರ್ನೆಟ್ ಆಫ್ ತಿಂಗ್ಸ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಯವನ್ನು ಉಪಯೋಗಿಸಿಕೊಂಡು ಹಲವಾರು ಹೊಸ ಟೆಕ್ನಾಲಜಿಗಳನ್ನು ಕಲಿತು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಗ್ಲೋಬ್ ಅಕ್ಯಾಡೆಮಿ ಆಫ್ ಬೆಂಗಳೂರು ಪ್ರೊ|| ಮಗೇಶ್ವರ್ ಭಾಗವಹಿಸಿ, ವೆಬ್ ಟೆಕ್ನಾಲಜಿಯ ಬಗ್ಗೆ ಪ್ರಾಧ್ಯಾಪಕರಿಗೆ ತಿಳಿಸಿಕೊಟ್ಟರು.
ಸ್ಯಾಮ್ಸಂಗ್ ಕಂಪನಿಯ ಪ್ರಿನ್ಸಿಪಾಲ್ ಎಂಜಿ ನಿಯರ್ ಡಾ|| ದಿನೇಶ್ ಅವರು ಡಾಟಾ ಸೈನ್ಸ್ ಮತ್ತು ಅದರ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಆದಿತ್ಯ ಎಸ್.ಕೆ.ಟೆಕ್ಯೂ ಲ್ಯಾಬ್ಸ್ ಕಂಪನಿ ಬೆಂಗಳೂರು ಭಾಗವಹಿಸಿ, ಇಂಟರ್ನೆಟ್ ಆಫ್ ತಿಂಗ್ಸ್ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ|| ಬಿ.ವೀರಪ್ಪ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು.
ಆನ್ಲೈನ್ನಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಹಲವಾರು ರಾಜ್ಯಗಳ ವಿದ್ಯಾಸಂಸ್ಥೆಯ ಸುಮಾರು 200 ಕಂಪ್ಯೂಟರ್ ಸೈನ್ಸ್ನ ಪ್ರಾಧ್ಯಾಪಕರು ಭಾಗವಹಿಸಿದ್ದರು.