ಶೀಘ್ರ `ದಾವಣಗೆರೆ’ ಕೊರೊನಾ ಮುಕ್ತ ಜಿಲ್ಲೆ : ಸಂಸದ ಸಿದ್ದೇಶ್ವರ

ಹರಿಹರ, ಜೂ.12- ಜಿಲ್ಲೆಯಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉತ್ತಮವಾದ ಕಾರ್ಯವನ್ನು ಮಾಡು ತ್ತಿರುವುದರಿಂದ ಇನ್ನು ಹತ್ತು ದಿನಗಳಲ್ಲಿ ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗುತ್ತದೆ ಎಂದು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬಿಜೆಪಿ ಘಟಕದ ವತಿಯಿಂದ  ಪ್ರಧಾನಿ ನರೇಂದ್ರ ಮೋದಿಯವರ 2 ನೇ ಆಡಳಿತದ ಒಂದು ವರ್ಷ ಪೂರೈಸಿದ ಆಡಳಿತದ ಸಾಧನೆ ಬಗ್ಗೆ ಜನರೇ ಪ್ರೇರಕ, ನಾನು ಪ್ರಧಾನ ಸೇವಕ ಎಂಬ ಕರಪತ್ರವನ್ನು ಮನೆ ಮನೆ ಬಾಗಿಲಿಗೆ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಕೊರೊನಾ ವೈರಸ್ ತಡೆಗಟ್ಟವುದಕ್ಕೆ ವಿಶೇಷ ವಾಗಿ ಶ್ರಮಿಸಿರುವ ಆಶಾ ಕಾರ್ಯಕರ್ತೆಯರು, ವೈದ್ಯರು, ಪೊಲೀಸ್ ಇಲಾಖೆ ಸೇರಿದಂತೆ ಹಲವಾರು ಇಲಾಖೆಯವರು ಜೀವದ ಹಂಗು ತೊರೆದು ಜನರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಟ್ಟು ಕೆಲಸ ಮಾಡಿದ್ದಾರೆ. ಅವರಿಗೆ ಬಿಜೆಪಿ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. 

ದೇಶದ ಜನತೆ ವಿದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡದೆ ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವುದಕ್ಕೆ ಮುಂದಾಗಬೇಕು. ಚೀನಾ ದೇಶದ ಯಾವುದೇ ವಸ್ತುಗಳನ್ನು ಬಳಸಬಾರದು. ನಮ್ಮ ದೇಶದಲ್ಲಿ ಉತ್ಪತ್ತಿ ಯಾಗುವಂತಹ ಮೇಕ್‌ ಇನ್ ಇಂಡಿಯಾ, ಸ್ವದೇಶಿ ಭಾರತ್ ಇಂತಹ ಹಲವಾರು ಯೋಜನೆ ಮೂಲಕ ಸಣ್ಣ ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷಾಂತರ ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂದರು.

ಹರಿಹರ ತಾಲ್ಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಸಾಗಾಟದ ಬಗ್ಗೆ ನಮ್ಮ ಗಮನಕ್ಕೆ ಇಲ್ಲ. ಅಧಿಕಾರಿಗಳ ಬಳಿ ಮಾತನಾಡಿ, ಅದನ್ನು ತಡೆಗಟ್ಟುವ ಕೆಲಸವನ್ನು ಮಾಡುವುದಾಗಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ಎಸ್.ಎಂ.ವೀರೇಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿ.ಪಂ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್, ದೂಡಾ ಸದಸ್ಯ ರಾಜು ರೋಖಡೆ, ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಘಟಕದ ಅಧ್ಯಕ್ಷ ಹಿಂಡಸಘಟ್ಟೆ ಲಿಂಗರಾಜ್, ನಗರಸಭೆ ಸದಸ್ಯರಾದ ಅಶ್ವಿನಿ ಕೃಷ್ಣ, ರಜನಿಕಾಂತ್, ನೀತಾ ಮೆಹರಾಡೆ, ವಿಜಯಕುಮಾರ್, ಮುಖಂಡರಾದ ಬಾತಿ ಚಂದ್ರಶೇಖರ್, ರೂಪಾ ಕಾಟ್ವೆ, ಮಂಜುನಾಥ್, ಕೆ.ಜಿ ಕೃಷ್ಣ, ಐರಣಿ ನಾಗರಾಜ್, ದೇವೇಂದ್ರಪ್ಪ, ಮಾಲತೇಶ್ ಭಂಡಾರಿ, ಕೆ.ಎನ್. ಹಳ್ಳಿ ಮಹಾಂತೇಶ್, ರಾಜೇಶ್, ಗಿರೀಶ್, ಪ್ರಶಾಂತ್, ವೀರಭದ್ರಪ್ಪ ಹಾಗೂ ಇತರರು ಹಾಜರಿದ್ದರು.

error: Content is protected !!