ಹರಿಹರದ ಕೆನರಾ ಬ್ಯಾಂಕಿನಲ್ಲಿ ಕೊರೊನಾ ಹರಡದಂತೆ ಸುರಕ್ಷತಾ ಕ್ರಮ

ಹರಿಹರದ ಕೆನರಾ ಬ್ಯಾಂಕಿನಲ್ಲಿ ಕೊರೊನಾ ಹರಡದಂತೆ ಸುರಕ್ಷತಾ ಕ್ರಮ - Janathavaniಜಿಲ್ಲಾ ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸುಶ್ರುತ್ ಡಿ. ಶಾಸ್ತ್ರಿ ಪರಿಶೀಲನೆ

ಹರಿಹರ, ಜೂ.11- ನಗರದ ಕೆನರಾ ಬ್ಯಾಂಕಿನಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವಲ್ಲಿ ಶಾಖೆಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ವೆಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿಯ  ಹಿನ್ನೆಲೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸುಶ್ರುತ್ ಡಿ. ಶಾಸ್ತ್ರಿ ಅವರು ಹರಿಹರ ಮುಖ್ಯ ಶಾಖೆಗೆ ಇಂದು ಭೇಟಿ ನೀಡಿ ಕೊರೊನಾ ವೈರಸ್ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.

ಶಾಖೆಯಲ್ಲಿ ಕೂಡಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಿ ದರು. ಶಾಖೆಯಲ್ಲಿ ಗ್ರಾಹಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರ ಬಗ್ಗೆ ಹಾಗೂ ಅದರ ಬಗ್ಗೆ ಬ್ಯಾಂಕ್ ಶಾಖೆಗಳಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ  ಕ್ರಮಗಳ ಬಗ್ಗೆ ವಿವರಿಸಿದರು.  ಗ್ರಾಹಕರು ಕೂಡಾ ಸ್ವಯಂ ಪ್ರೇರಿತರಾಗಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಮನವಿ ಮಾಡಿದರು.

ಶಾಖೆಯಲ್ಲಿ ಕಟ್ಟುನಿಟ್ಟಾಗಿ ಸ್ಯಾನಿಟೈಸರ್‍ ಲಭ್ಯವಿರುವಂತೆ ನೋಡಿಕೊಳ್ಳುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಗ್ರಾಹಕರು ಮುಖಕ್ಕೆ ಮಾಸ್ಕ್ ಧರಿಸುವಂತೆ ನೋಡಿಕೊಳ್ಳು ವಂತೆಯೂ ಬ್ಯಾಂಕ್ ಸಿಬ್ಬಂದಿ ವರ್ಗದವರಿಗೆ ಶಾಸ್ತ್ರಿ ಸೂಚಿಸಿದರು.

ಬ್ಯಾಂಕುಗಳಿಗೆ ಪ್ರತಿನಿತ್ಯ ನೂರಾರು ಗ್ರಾಹಕರು ಬಂದು ಹೋಗುವುದರಿಂದ ರೋಗ ಹರಡುವ ಸಂಭವನೀಯತೆ ಹೆಚ್ಚಿರುವುದರಿಂದ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ಸೂಚನೆ ಗಳನ್ನು ಪಾಲಿಸುವುದು ಬ್ಯಾಂಕುಗಳಿಗೆ ಕಡ್ಡಾಯ ವಾಗಿದೆ. ಇದನ್ನು ಎಲ್ಲಾ ಬ್ಯಾಂಕ್ ಶಾಖೆಗಳಿಗೆ ಅನ್ವಯವಾಗುತ್ತದೆ. ಈ ವಿಷಯದಲ್ಲಿ ನಿರ್ಲಕ್ಷ್ಯತನಕ್ಕೆ ಅವಕಾಶವಿಲ್ಲವೆಂದು ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕರು ತಿಳಿಸಿದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಅಚ್ಯುತ್ ಉಪಸ್ಥಿತರಿದ್ದರು.

error: Content is protected !!