ಜೆಲ್ಲಿ, ಎಂ-ಸ್ಯಾಂಡ್, ಸಿಮೆಂಟ್ ದರ ದಿಢೀರ್ ಏರಿಕೆಗೆ ಖಂಡನೆ

ದಾವಣಗೆರೆ, ಜೂ.11- ಲಾಕ್‍ಡೌನ್ ತೆರವಾದ ನಂತರ ಪ್ರಸ್ತುತ ಜೆಲ್ಲಿ, ಎಂ-ಸ್ಯಾಂಡ್ ಹಾಗೂ ಸಿಮೆಂಟ್ ದರ ದಿಢೀರ್ ಏರಿಕೆಯಾಗಿದ್ದು, ಇದು ನಷ್ಟದ ಬರೆಯ ಜೊತೆಗೆ ಕಾಮಗಾರಿಗಳ ಗುಣಮಟ್ಟವನ್ನು ಕುಂಠಿತಗೊಳಿಸುವುದು ಎಂದು ನಗರ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೆಚ್. ಜಯಣ್ಣ ತಿಳಿಸಿದರು.

ಲಾಕ್‍ಡೌನ್‍ಗೂ ಮೊದಲು 20 ಎಂಎಂ ಜೆಲ್ಲಿ 1 ಅಡಿಗೆ 28 ರಿಂದ 30 ರೂ. ಹಾಗೂ 40 ಎಂ ಎಂ ಜೆಲ್ಲಿ 1 ಅಡಿಗೆ 25 ರೂ, ಎಂ-ಸ್ಯಾಂಡ್ ಒಂದು ಟನ್ ಗೆ 900 ರೂ ಹಾಗೂ ಸಿಮೆಂಟ್ 1 ಚೀಲಕ್ಕೆ 300 ರೂ. ಮಾರುಕಟ್ಟೆಯಲ್ಲಿ ದರವಿತ್ತು. ಆದರೆ ಇದೀಗ ಲಾಕ್‍ಡೌನ್ ತೆರವಾದ ಬಳಿಕ ಜೆಲ್ಲಿಗೆ 50 ರೂ, ಎಂ-ಸ್ಯಾಂಡ್ 1200 ಹಾಗೂ ಸಿಮೆಂಟ್ 430 ರಂತೆ ದರ ಏರಿಕೆಯಾಗಿದೆ. ಹೀಗೆ ದುಪ್ಪಟ್ಟು ದರ ನೀಡಿ ಸಾಮಗ್ರಿ ಗಳನ್ನು ಪಡೆದು ಕಾಮಗಾರಿ ನಿರ್ವಹಿಸಿದರೆ ಬಹಳಷ್ಟು ಲುಕ್ಸಾ ನಾಗಲಿದೆ ಯಲ್ಲದೇ, ಕಾಮಗಾರಿ ಗಳ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಅಳಲಿಟ್ಟರು.

ದರ ಏರಿಕೆಯ ಬಗ್ಗೆ ಪ್ರಶ್ನಿಸಿದರೆ ದಾವಣಗೆರೆ ತಾಲ್ಲೂಕು ಮತ್ತು ಹರಪನಹಳ್ಳಿ ಕ್ರಷರ್ ಮಾಲೀಕರು ರಾಜಧನ ನೆಪ ಹಾಗೂ ಸಿಮೆಂಟ್ ಕಂಪನಿಗಳ ವಿತರಕರು ಲಾಕ್‌ಡೌನ್ ನಷ್ಟ ಹೇಳಿ ದರ ಏರಿಕೆಯ ಉತ್ತರ ನೀಡುತ್ತಿದ್ದಾರೆ. ಆದರೆ ಈ ಬಗ್ಗೆ ಯಾರೊಂದಿಗೂ ಸಭೆ ಮಾಡಿಲ್ಲ. ಯಾರನ್ನೂ ಹೇಳದೆ ಕೇಳದೆ ಈ ರೀತಿ ಏಕಾಏಕಿ ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಆರ್. ವಿರೂಪಾಕ್ಷಪ್ಪ ಕಕ್ಕರಗೊಳ್ಳ, ಪ್ರಧಾನ ಕಾರ್ಯ ದರ್ಶಿ ಜಿ.ಎಲ್. ಶಿವಪ್ರಕಾಶ್, ಖಜಾಂಚಿ ಕೆ. ಶಿವಕುಮಾರ್, ಕೆ. ಗಂಗಪ್ಪ, ಹೆಚ್. ಚಂದ್ರಪ್ಪ, ಡಿ. ಈಶ್ವರ್, ಎ.ಎಂ. ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.

error: Content is protected !!