ದಾವಣಗೆರೆ, ಜೂ.10- ನಗರದ ರೋಟರಿ ಸಂಸ್ಥೆ ವತಿಯಿಂದ `ಕೌನ್ ಬನೇಗಾ ಕರೋಡಪತಿ’ ಮಾದರಿಯಲ್ಲಿ `ಕೌನ್ ಬನೇಗಾ ಜ್ಞಾನಪತಿ’ ಕಾರ್ಯಕ್ರಮವನ್ನು ನಡೆಸಲಾಯಿತು. ಲೋಕಲ್ ಕೋವಿಡ್-19 ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು.
ರೋಟರಿ ಕ್ಲಬ್ ಅಧ್ಯಕ್ಷ ವಿಕಾಸ ಸಂಘವಿ ಜ್ಞಾನದ ಕಾರ್ಯಕ್ರಮವನ್ನು ರೂಪಿಸಿದರು. ರೋಟರಿ ಕ್ಲಬ್ಬಿನ ಹಿರಿಯರಾದ ಎಸ್.ಕೆ. ವೀರಣ್ಣ, ಎಂ.ಎಸ್. ರಾಮಚಂದ್ರಪ್ಪ, ಜಗನ್ನಾಥ್, ರಮೇಶ್ ಅಂಬರ್ ಕರ್, ಮೃತ್ಯುಂಜಯ, ರೋಶನ್ ರೇವಣಕರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾರದ ಮಾಗಾನಹಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು. ಪಿ.ಬಿ. ಪ್ರಕಾಶ್, ವಿಶ್ವನಾಥ ರೆಡ್ಡಿ, ಜಗದೀಶ ಬೇತೂರು, ಆನಂದ ಅಂದನೂರು, ಮಾಧವ ಪದಕಿ ಉಪಸ್ಥಿತರಿದ್ದರು. ಮುರುಗೇಶ್ ಚಿಗಟೇರಿ 800 ಅಂಕಗಳನ್ನು ಗಳಿಸಿ ವಿಜೇತರಾದರು.
ಅತಿಥಿಯಾಗಿ ಆಗಮಿಸಿದ ರಿಲಯನ್ಸ್ ಮಾರ್ಕೆಟ್ ವ್ಯವಸ್ಥಾಪಕ ಸತೀಶ್, ವಿಕಾಸ ಸಂಘವಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.