ಹರಿಹರದ ಕೆನರಾ ಬ್ಯಾಂಕ್‌ನಲ್ಲಿ ಸಾಮಾಜಿಕ ಅಂತರದ ಕೊರತೆ

ಹರಿಹರ, ಜೂ.10- ನಗರದ ಕೆನರಾ ಬ್ಯಾಂಕ್ ಪಿ.ಬಿ. ರಸ್ತೆಯ ಬ್ರಾಂಚ್‌ನಲ್ಲಿ ಸಾರ್ವಜನಿಕರು ಯಾವುದೇ ಅಂತರವನ್ನು ಕಾಯ್ದುಕೊಳ್ಳದೇ ಹಣವನ್ನು ಪಾವತಿಸುವುದು ಮತ್ತು ತೆಗೆದುಕೊಂಡು ಹೋಗುವುದನ್ನು ಮಾಡುತ್ತಿದ್ದರು. ಬ್ಯಾಂಕ್ ಸಿಬ್ಬಂದಿಗಳು ಇದನ್ನು ನೋಡಿದರೂ ಸಹ ನೋಡದೇ ಇರುವಂತೆ ವರ್ತಿಸುವುದು ಕಂಡುಬಂದಿತು.

ನಗರದ ಪ್ರತಿಷ್ಠಿತ ಬ್ಯಾಂಕ್ ಆದ ಕೆನರಾ ಬ್ಯಾಂಕ್‌ ದಿನಕ್ಕೆ ಲಕ್ಷಾಂತರ ವಹಿವಾಟು ನಡೆಸುತ್ತದೆ. ಈ ಬ್ಯಾಂಕ್‌ಗೆ ನಗರ ಸೇರಿದಂತೆ ತಾಲ್ಲೂಕಿನ ಹಲವಾರು ಗ್ರಾಮದ ಸಾರ್ವಜನಿಕರು ವಹಿವಾಟು ನಡೆಸಲು ಆಗಮಿಸುತ್ತಾರೆ. ಪ್ರತಿದಿನ ಆಗಮಿಸುವ ನೂರಾರು ಜನರಿಗೆ ಸ್ವಲ್ಪ ಯಾಮಾರಿದರೆ ಕೊರೊನಾ ವೈರಸ್ ರೋಗದ ಲಕ್ಷಣಗಳು ಹೆಚ್ಚಾಗಿ ಹರಡುವ ಸಾಧ್ಯತೆಗಳು ಇರುತ್ತದೆ. ಹಾಗಾಗಿ ಬ್ಯಾಂಕ್ ತನ್ನ ಗ್ರಾಹಕರಿಗೆ ಸರಿಯಾದ ಸ್ಯಾನಿಟೈಸರ್ ವ್ಯವಸ್ಥೆ ಮತ್ತು ಅಂತರವನ್ನು ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿದರೆ ಸಾರ್ವಜನಿಕರಿಗೆ ರೋಗದ ಭಾದೆ ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಗಟ್ಟಲು ಸಹಾಯ ಆಗುತ್ತದೆ. ಆದರೆ ಬರುವಂತಹ ಸಾರ್ವಜನಿಕರಿಗೆ ಯಾವುದೇ ವ್ಯವಸ್ಥೆಯನ್ನು ಮಾಡಿರುವುದಿಲ್ಲ.

ಆದ್ದರಿಂದ ಸಾರ್ವಜನಿಕರಿಗೆ ಕೊರೊನಾ ವೈರಸ್ ರೋಗದ ಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಯಲು ಮೊದಲು ಬ್ಯಾಂಕ್ ಒಳಗಡೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು ಮತ್ತು ಅಂತರವನ್ನು ಕಾಯ್ದುಕೊಳ್ಳಲು ಸರಿಯಾದ ಸ್ಥಳವನ್ನು ನಿಗದಿ ಪಡಿಸಬೇಕು ಎಂದು ಗ್ರಾಹಕರು ತಿಳಿಸಿದರು.

ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಅಚ್ಯುತಾ ಮಾತನಾಡಿ, ನಾನು ಕಳೆದ ಎರಡೂವರೆ ತಿಂಗಳ ಕಾಲ ನಮ್ಮ ಸ್ವಂತ ಹಣದಿಂದ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಯಿತು. ಈಗ ನಾನು ಅದನ್ನು ಮಾಡಲಿಕ್ಕೆ ಸಾಧ್ಯವಿಲ್ಲ. ಜನರಿಗೆ ಎಷ್ಟು ಹೇಳಿದರೂ ಕೇಳುತ್ತಿಲ್ಲ. ಹಾಗಾಗಿ ನಾವುಗಳು ಹೇಳುವುದನ್ನೇ ಬಿಟ್ಟಿದ್ದೇವೆ ಎಂದು ಹೇಳಿದರು.

error: Content is protected !!