ದಾವಣಗೆರೆ ಸಮೀಪದ ಕುಂದುವಾಡ ಕೆರೆ ಏರಿ ವಾಯುವಿಹಾರಿಗಳ ನೆಚ್ಚಿನ ತಾಣ. ಏರಿಯ ಎರಡೂ ಬದಿಗಳಲ್ಲಿ ರಕ್ತ ವರ್ಣದ ಗುಲ್‌ಮೊಹರ್ ಗಿಡಗಳು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿ, ಸ್ವರ್ಗವನ್ನೇ ಧರೆಗಿಳಿಸಿದಂತಿದೆ. ಮರದ ಕೆಳಗೆ ಹೂವುಗಳು ಉದುರಿ ಮೆತ್ತನೆಯ ಕೆಂಪುಹಾಸು ಹಾಸಿದಂತೆ ಭಾಸವಾಗುತ್ತದೆ. ಇದು ಮಾರ್ಚ್‌ನಿಂದಲೇ ಅರಳಲು ಆರಂಭವಾಗಿ ಜೂನ್ ತಿಂಗಳವರೆಗೂ ಇರುತ್ತವೆ. ಸ್ಥಳೀಯವಾಗಿ ಇದನ್ನು ಮೇ ಫ್ಲವರ್ ಎಂದೇ ಕರೆಯಲಾಗುತ್ತದೆ.
January 24, 2025