ಹೊನ್ನಾಳಿ : ದೇವಸ್ಥಾನಗಳ ಪುನರಾರಂಭ, ಭಕ್ತರ ಸಂಖ್ಯೆ ಕ್ಷೀಣ

ಹೊನ್ನಾಳಿ, ಜೂ.8- ಮಹಾಮಾರಿ ಕೊರೊನಾ ವೈರಸ್ ಹರಡುವಿಕೆ ಯನ್ನು ನಿಯಂತ್ರಿಸುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ಮುಚ್ಚಿಸಿ ಲಾಕ್‍ಡೌನ್ ಮಾಡಿತ್ತು. 

ದ್ವಿತೀಯ ಮಂತ್ರಾಲಯವೆಂದೇ ಹೆಸರಾಗಿರುವ ತಾಲ್ಲೂಕಿನ ಶ್ರೀ ರಾಘವೇಂದ್ರಸ್ವಾಮಿ ದೇವಾಲಯ, ಮಾರಿಕೊಪ್ಪದ ಶ್ರೀ ಹಳದಮ್ಮ, ಸುಂಕದಕಟ್ಟೆಯ ಶ್ರೀ ನರಸಿಂಹಸ್ವಾಮಿ, ಶ್ರೀ ಮಂಜುನಾಥ, ಕುಂದೂರಿನ ಶ್ರೀ ಆಂಜನೇಯ ಸ್ವಾಮಿ, ಪಟ್ಟಣದ ಶ್ರೀ ನೀಲಕಂಠೇಶ್ವರ, ಶ್ರೀ ದುರ್ಗಮ್ಮ, ತೀರ್ಥರಾಮೇಶ್ವರ ದೇವಾಲಯಗಳು ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟಿವೆ. 

ಭಕ್ತರ ಸಂಖ್ಯೆ ಕಡಿಮೆ : ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹಲವು ದೇವಸ್ಥಾನಗಳನ್ನು ತರೆದಿದ್ದರೂ ಸಹ ಭಕ್ತರ ಸಂಖ್ಯೆ ಕ್ಷೀಣವಾಗಿತ್ತು. ಸುಂಕದಕಟ್ಟೆ ಗ್ರಾಮದ ಶ್ರೀ ನರಸಿಂಹಸ್ವಾಮಿ, ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ರಾಜು ಮಾತನಾಡಿ, ಸರ್ಕಾರಗಳ ಮಾರ್ಗಸೂಚಿಯಂತೆ ಸಾಮಾಜಿಕ ಅಂತರದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಪ್ರಸಾದದ ವ್ಯವಸ್ಥೆಯನ್ನು ನಿಲ್ಲಿಸಿದ್ದೇವೆ ಎಂದರು.

error: Content is protected !!