ಗುಜರಾತ್‍ನ ಬಾಲಕ ಕ್ವಾರಂಟೈನ್‌ಗೆ

ಹರಪನಹಳ್ಳಿ, ಜೂ.8- ಕೋವಿಡ್-19 ಪಾಸಿಟಿವ್ ಹೊಂದಿದ್ದ 13 ವರ್ಷದ ಬಾಲಕ ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಗೊಂಡು ಅಂಬ್ಯು ಲೆನ್ಸ್ ಮೂಲಕ ಹರಪನಹಳ್ಳಿ ಹೋಂ ಕ್ವಾರಂಟೈನ್‍ಗೆ ಮರಳಿದ್ದಾನೆ.

ಕಳೆದ ಮೇ 31ರಂದು ಕೋವಿಡ್-19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನು ಈ ಹಿಂದೆ ತಂದೆಯೊಂದಿಗೆ ಗುಜರಾತ್‍ನಿಂದ ಬಂದು ನೇರವಾಗಿ ತೋರಣಗಲ್ ಬಳಿ 28 ದಿನಗಳ ಕಾಲ ಕ್ವಾರಂಟೈನ್‍ನಲ್ಲಿದ್ದು, ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಹರಪನಹಳ್ಳಿ ನಿವಾಸಕ್ಕೆ ಆಗಮಿಸಿದ್ದರು. ಆದರೆ ಎರಡು ದಿನಗಳ ನಂತರ ಆಸ್ಪತ್ರೆಯಿಂದ ಬಾಲಕನಿಗೆ ಪಾಸಿಟಿವ್ ಬಂದಿರುವುದಾಗಿ ತಿಳಿಸಿ ಪುನಃ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನ ಸಂಪರ್ಕದಲ್ಲಿರುವವರನ್ನು ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್‍ಗೆ ಕಳುಹಿಸಲಾಗಿತ್ತು. ಈಗ ಸರ್ಕಾರದ ನಿಯಾಮಾನುಸಾರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಈತನನ್ನು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.

ಅಂಬ್ಯೂಲೆನ್ಸ್ ಮೂಲಕ ಆಗಮಿಸಿದ್ದ ಬಾಲಕನನ್ನು ಸ್ಥಳೀಯರು ಸ್ವಾಗತಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ವೈದ್ಯಾಧಿಕಾರಿ ಇನಾಯತ್ ಬಾಲಕನಿಗೆ ಹೋಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಿದರು.

error: Content is protected !!