ಹರಪನಹಳ್ಳಿ, ಜೂ.6- ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸುವುದಾಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮುಷ್ಕರವನ್ನು ಭಾರತೀಯ ಮಜ್ದೂರ್ ಸಂಘ ಸಂಯೋಜಿಸಿದೆ. ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಆರೋಗ್ಯ ಮತ್ತು ಜೀವವಿಮೆ, ಹೆಚ್ಆರ್ ಪಾಲಿಸಿ ಒಳಗೊಂಡು 14 ಬೇಡಿಕೆಗಳು ಈಡೇರಬೇಕು, ಅಲ್ಲದೇ ವಿಶೇಷ ಕೋವಿಡ್-19 ರ ಪ್ಯಾಕೇಜ್ ಹಾಗೂ ನೌಕರರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಆಯನೂರು ಮಂಜುನಾಥ ಮಾತನಾಡಿದರು. ಸಂಘದ ಮುಖಂಡರಾದ
ಚಂದ್ರಪ್ಪ ಪಿ., ಆದಿತ್ಯ ಪಾಟೀಲ್, ದೀಪ್ತಿ, ಮಂಜುಳಾ, ರೇಖಾ ಜಿ, ಎಂ.ಶೃತಿ, ಜೆ.ಶೃತಿ, ಎನ್.ಎಸ್. ರೇಖಾ, ಚನ್ನಬಸಮ್ಮ, ಜಿ.ಎ.ಮಲ್ಲಿಕಾರ್ಜುನಯ್ಯ, ಬಸಮ್ಮ, ಅಂಜಿನಮ್ಮ, ಜಿ.ಗೋವಿಂದರಾಜ್, ಕೆ.ಎಂ. ಅನಿತಾ, ಹೆಚ್.ವಾಣಿ, ಪವನ್, ಪ್ರದೀಪ್, ಹಾಲೇಶ್, ಪ್ರಭಾಕರ್, ಅರವಿಂದ್ ಹಾಗೂ ಮತ್ತಿತರರು ಹಾಜರಿದ್ದರು.