ಹರಿಹರ: ರೈತರ ಮುಖದಲ್ಲಿ ಮಂದಹಾಸ – ಕೃಷಿ ಚಟುವಟಿಕೆಗಳು ಪ್ರಾರಂಭ

ಎಂ. ಚಿದಾನಂದ ಕಂಚಿಕೇರಿ


ಹರಿಹರ ತಾಲ್ಲೂಕಿನಲ್ಲಿ ಮುಂಗಾರು ಮಳೆ ಚೆನ್ನಾಗಿ ಆಗುತ್ತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿವೆ. 

ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ನೋಡಿ ತಾಲ್ಲೂಕಿನ ರೈತರು ಕೂಡಾ ತಮ್ಮ ಮುಂದಿನ ಜೀವನದ ಬಗ್ಗೆ ಬಹಳ ದೊಡ್ಡ ಮಟ್ಟದಲ್ಲಿ ಆತಂಕ ಪಡುತ್ತಿದ್ದರು. ಆದರೆ ದೇವರ ದಯೆಯಿಂದ ತಾಲ್ಲೂಕಿ ನಲ್ಲಿ ಇದುವರೆಗೂ ಕೂಡಾ ಒಂದೇ ಒಂದು ಕೊರೊನಾ ವೈರಸ್ ರೋಗದ ಲಕ್ಷಣಗಳು ಕಂಡುಬರದೇ ಇರುವು ದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿ ತಮ್ಮ ಮುಂದಿನ ಜೀವನಕ್ಕಾಗಿ ಮತ್ತೆ ತಮ್ಮ ಕೃಷಿ ಚಟುವಟಿ ಕೆಗಳನ್ನು ಪ್ರಾರಂಭಿಸಿ ದ್ದಾರೆ. ಈಗಾಗಲೇ ಮಳೆಯಾಗು ತ್ತಿರುವುದರಿಂದ ರೈತರು ತಮ್ಮ ಹೊಲಗಳಲ್ಲಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮಳೆ ಬಂದ ತಕ್ಷಣ ಬಿತ್ತನೆ ಕಾರ್ಯ ಪ್ರಾರಂಭಿಸಲಿದ್ದಾರೆ.

ರೈತರ ಚುಟುವಟಿಕೆಗಳು ಪ್ರಾರಂಭವಾಗುತ್ತಿ ದ್ದಂತೆ, ಇತ್ತ ಕೃಷಿ ಇಲಾಖೆ ಕೂಡ ರೈತರಿಗೆ ಅವಶ್ಯ ವಾಗಿ ಬೇಕಾಗುವ ಗೊಬ್ಬರ, ಬಿತ್ತನೆ ಬೀಜ, ರಾಸಾ ಯನಿಕ ಔಷಧಿ ಮುಂತಾದ ವಸ್ತುಗಳನ್ನು ಸರಿಯಾದ ಸಮಯಕ್ಕೆ ಒದಗಿಸಲು ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡು ಅವುಗಳನ್ನು ಪೂರೈಸುತ್ತಿದೆ. ಈಗಾ ಗಲೇ ಹರಿಹರ ಮತ್ತು ಮಲೇಬೆನ್ನೂರು ಗ್ರಾಮದ ರೈತ ಸಂಪರ್ಕ ಕೇಂದ್ರಗಳಿಂದ ರೈತರಿಗೆ ಮೆಕ್ಕೆ ಜೋಳ, ತೊಗರಿ ಹಾಗೂ ಭತ್ತದ ಬೀಜ ವಿತರಣೆ ಯನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. 

ಹರಿಹರ: ರೈತರ ಮುಖದಲ್ಲಿ ಮಂದಹಾಸ - ಕೃಷಿ ಚಟುವಟಿಕೆಗಳು ಪ್ರಾರಂಭ - Janathavani

ಜೊತೆಗೆ ಲಘು ಪೋಷಕಾಂಶ ಮಿಶ್ರಣ ತಳಿ ಲಭ್ಯವಿರುತ್ತದೆ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ರೈತರಿಗೆ ಮೆಕ್ಕೆಜೋಳ ಪ್ರತಿ ಕೆ.ಜಿ.ಗೆ 30 ರೂ., 5 ಕೆ,ಜಿ. 150 ರೂ. ಮತ್ತು ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆ.ಜಿ.ಗೆ 20 ರೂ., 5 ಕೆ.ಜಿ.ಗೆ 100 ರೂ., ತೊಗರಿ ಬೆಳೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದವರಿಗೆ ರೂ. 37.50 ಮತ್ತು ಸಾಮಾನ್ಯ ವರ್ಗದವರಿಗೆ ರೂ. 25 ರಿಯಾ ಯಿತಿಯನ್ನು ನೀಡಲಾಗುತ್ತಿದೆ. ರೈತರು ಅಪೇಕ್ಷಿಸುವ ಮೆಕ್ಕೆಜೋಳದ ತಳಿಗಳು ಸಹ ಲಭ್ಯವಿರುತ್ತವೆ.

ಸರ್ಕಾರ ರೈತರಿಗೆ ಬಿತ್ತನೆ ಬೀಜವನ್ನು ಪಡೆಯಲು ರಿಯಾಯಿತಿಯನ್ನು ಘೋಷಣೆ ಮಾಡಿರುವುದರಿಂದ ಯಾವುದೇ ಲಾಭ ಆಗು ವುದಿಲ್ಲ. ಕಾರಣ ಅವರು ಕೊಡುವ 100/150 ರೂ. ಅಧಿಕಾರಿಗಳು ಕೇಳುವ ಪಹಣಿ, ಆಧಾರ ಕಾರ್ಡ್, ಬ್ಯಾಂಕಿನ ಪಾಸ್ ಬುಕ್ ಜೆರಾಕ್ಸ್, ಪೋಟೋ ಜಾತಿ ಪ್ರಮಾಣ ಪತ್ರದ ಪ್ರತಿಗಳಿಗೆ ಅವರು ನೀಡುವ ರಿಯಾಯಿತಿ ಹಣ ಖರ್ಚು ಆಗುತ್ತದೆ. ಆದ್ದರಿಂದ ರಿಯಾಯಿತಿ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ಹಾಕಿದರೆ ಒಳ್ಳೆಯದು. ರೈತರು ಅಂಗಡಿಯಲ್ಲಿ ಖರೀದಿ ಮಾಡುತ್ತಾರೆ. ಜೊತೆಗೆ ಸಂಪರ್ಕ ಕೇಂದ್ರದಲ್ಲಿ ಕಾರ್ಯವನ್ನು ನಿರ್ವಹಿಸುವ ಸಂಬಳವಾದರೂ ಸರ್ಕಾರಕ್ಕೆ ಉಳಿಯುತ್ತದೆ. ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಬೆಳೆ ನಷ್ಟವಾಗಿದೆ. ಯಾವ ಸೌಲಭ್ಯಗಳು ಅವರಿಗೆ ಬಂದಿವೆ ಎಂದು ಹೇಳಿ ಎಂದು ಒಂದು ತಾಸು ಕೇಳಿದರೂ ಸಹ ಯಾವುದೇ ಸೌಕರ್ಯಗಳು ಬಂದಿರುವುದಿಲ್ಲ ಎಂದು ಹೇಳಿ ಕಳಿಸಿದರು. ಯಾವಾಗೋದ್ರು ಅದನ್ನೇ ಹೇಳುತ್ತಾರೆ.

– ಬೆಳ್ಳೂಡಿ ಸತೀಶ್, ರೈತ

ತಾಲ್ಲೂಕಿನಲ್ಲಿ ಈ ಬಾರಿ ಪ್ರಸ್ತುತ 2020ನೇ ಸಾಲಿನಲ್ಲಿ ಜೂನ್ ರವರೆಗೆ 131 ಮಿ.ಮೀ. ವಾಡಿಕೆ ಮಳೆಯನ್ನು ನಿರೀಕ್ಷೆ ಮಾಡಲಾಗಿದ್ದು, ಆದರಂತೆ ಇಲ್ಲಿಯವರೆಗೆ 105 ರಷ್ಟು ಮಳೆ ಆಗಿದೆ. ಬಿತ್ತನೆ ಪ್ರಾರಂಭದ ಹಂತದಲ್ಲಿ ಇರುವುದರಿಂದ ಮಳೆ ಬರುವ ಎಲ್ಲಾ ಲಕ್ಷಣಗಳು ಇರುವುದರಿಂದ ಈ ಬಾರಿ ತಾಲ್ಲೂಕಿನಲ್ಲಿ ಮಳೆಯ ಕೊರತೆ ಬಾರದು. ಹವಾಮಾನ ಇಲಾಖೆ ಕೂಡಾ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತದೆ ಎಂದು ನಿರೀಕ್ಷೆಯನ್ನು ಮಾಡಿದೆ. ತಾಲ್ಲೂಕಿನ ರೈತರಿಗೆ ಅನುಕೂಲವಾಗುವಂತೆ ಗೊಬ್ಬರದ ಅಂಗಡಿಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಯೂರಿಯಾ, ಡಿಎಪಿ. ಕಾಂಪ್ಲೆಕ್ಸ್ ಸೇರಿದಂತೆ ಅನೇಕ ರೀತಿಯ ಬಿತ್ತನೆ ಬೀಜ, ಗೊಬ್ಬರ ಮತ್ತು ಔಷಧಿ ದಾಸ್ತಾನು ಶೇಖರಣೆ ಮಾಡಲಾಗಿದೆ. ಇದರಿಂದಾಗಿ ರೈತರಿಗೆ ಯಾವುದೇ ಬಿತ್ತನೆ ಬೀಜ, ಗೊಬ್ಬರ ಮತ್ತು ಔಷಧಿ ಕೊರತೆ ಇರುವುದಿಲ್ಲ. 

 – ವಿ.ಪಿ. ಗೋವರ್ಧನ್, ಸಹಾಯಕ ಕೃಷಿ ನಿರ್ದೇಶಕರು

ಕೃಷಿ ಅಧಿಕಾರಿ ವಿ.ಪಿ. ಗೋವರ್ಧನ್ ಮಾತನಾಡಿ ನಮ್ಮ ಇಲಾಖೆ ಕೊರೊನಾ ಸಮಯದಲ್ಲಿ ರೈತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ರಸಗೊಬ್ಬರ ಅಂಗಡಿಗಳನ್ನು ತೆರೆದು ರೈತರಿಗೆ ಅವಶ್ಯವಾಗಿ ಬೇಕಾಗುವ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗಿತ್ತು. ಬೇಸಿಗೆ ಹಂಗಾಮಿನ ಭತ್ತದ ಬೇಳೆಯ ಕಟಾವು ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿ ಇದೆ. ತಡವಾಗಿ ನಾಟಿ ಮಾಡಿದ ಭತ್ತ ಕಟಾವು ಕಾರ್ಯವು ಸಹ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 

ತಡವಾಗಿ ನಾಟಿ ಆದ ಭತ್ತದಲ್ಲಿ ಕಾಂಡಕೊರಕದ ಹುಳುವಿನ ಬಾಧೆ ಕಂಡುಬಂದಿದ್ದು, ತೆನೆ ಬರುವ ಹಂತದಲ್ಲಿ ಕಂಡು ಬಂದಾಗ ತೆನೆಗಳಲ್ಲಿ ಕಾಳು ಜೊಳ್ಳಾಗುವುದು. 

ಈ ಹುಳುವಿನ ಹತೋಟಿಗೆ ರೈತರು ಕೂಡಲೇ ಮೊನೋಕ್ರೋಟೋಫಾಸ್ 36 ಎಸ್.ಎಲ್. ಔಷಧಿಯನ್ನು 1.5 ಎಂ.ಎಲ್. ಪ್ರತಿ ಲೀಟರ್ ನೀರಿಗೆ ಅಥವಾ ಕ್ಲೋರೋಫೈರಿಫಾಸ್ 20 ಇಸಿ 2 ಎಂ.ಎಲ್. ಪ್ರತಿ ಲೀಟರ್‍ಗೆ ಸೇರಿಸಿ ಬೆಳೆಗೆ ಸಿಂಪಡಿಸಿದರೆ ಸದರಿ ಹುಳುವಿನ ಬಾಧೆಯನ್ನು ಹತೋಟಿಗೆ ತಂದು ಹೊಸದಾಗಿ ಬಂದ ತೆಂಡೆಗಳ ಹುಳುವಿನ ಬಾಧೆಯಿಂದ ರಕ್ಷಿಸಬಹುದು. ಅಲ್ಲಲ್ಲಿ ಕುತ್ತಿಗೆ ಬೆಂಕಿ ರೋಗ ಕೂಡಾ ಕಂಡು ಬಂದಿದ್ದು, ರೋಗದ ಪರಿಣಾಮವಾಗಿ ತೆನೆ ಕೆಳಭಾಗದಲ್ಲಿ ಕತ್ತಿನ ಮೇಲೆ ಕಪ್ಪು ಅಥವಾ ಕಂದು ಬಣ್ಣದ ಮಚ್ಚೆ ಕಾಣಿಸಿಕೊಂಡ ತೆನೆ ಜೊಳ್ಳಾಗುತ್ತದೆ. ಇದರ ಹತೋಟಿಗೆ ಟ್ರೈಸೈಕ್ಲೊಜೋಲ್ 75 ಡಬ್ಲೂಯನ್ನು ಪ್ರತಿ ಲೀಟರ್ ನೀರಿಗೆ 0.6 ಗ್ರಾಂ ಸೇರಿಸಿ ಸಿಂಪರಣೆ ಮಾಡಿ ರೋಗವನ್ನು ಹತೋಟಿಗೆ ತರಬಹುದು ಎಂದು ಹೇಳಿದರು. ಈ ವೇಳೆ ಮಲ್ಲಿಕಾರ್ಜುನ್ ಹುಣಿಸಿಕಟ್ಟಿ, ದೇವೆಂದ್ರಪ್ಪ, ಪ್ರಸಾದ್ ಇದ್ದರು.

error: Content is protected !!