ಹರಿಹರ ಎಪಿಎಂಸಿ ಅಧ್ಯಕ್ಷರಾಗಿ ಸಾರಥಿ ಹನುಮಂತರೆಡ್ಡಿ

ಹರಿಹರ, ಜೂ. 6-  ಸಾರಥಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸದಸ್ಯ ಹೊಸಳ್ಳಿ ಹನುಮಂತರೆಡ್ಡಿ ಅವರು ಹರಿಹರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಕೊಕ್ಕನೂರು ಕ್ಷೇತ್ರದ ಬಿಜೆಪಿ ಸದಸ್ಯ ಕೂಸಗಟ್ಟಿ ಬಸವರಾಜ್ ಅವರು ಪುನರಾಯ್ಕೆಯಾದರು. ಹರಿಹರ ಎಪಿಎಂಸಿಯಲ್ಲಿ ಕಾಂಗ್ರೆಸ್-ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸುತ್ತಿವೆ. ಚುನಾವಣಾಧಿಕಾರಿ ತಹಶೀಲ್ದಾರ್ ರಾಮಚಂದ್ರಪ್ಪ ಅವರು ಕಾರ್ಯ ನಿರ್ವಹಿಸಿದರು. ಎಪಿಎಂಸಿ ಕಾರ್ಯದರ್ಶಿ ಶ್ರೀಮತಿ ವಿದ್ಯಾಶ್ರೀ ಸಹಕರಿಸಿದರು. ಎಪಿಎಂಸಿ ಸದಸ್ಯರಾದ ಅಮರಾವತಿ ಮಹಾದೇವಪ್ಪ ಗೌಡ್ರು, ಜಿ. ಮಂಜುನಾಥ್ ಪಟೇಲ್, ಬೆಳ್ಳೂಡಿ ನರೇಂದ್ರ, ಮಲ್ಲನಾಯ್ಕನಹಳ್ಳಿ ಗೌಡ್ರ ಶೇಖರಪ್ಪ, ಶಾಂತಮ್ಮ ಸಣ್ಣಗೌಡ್ರ, ತಂಬಳಿ ರುದ್ರಪ್ಪ, ಭಾನುವಳ್ಳಿ ಮಲ್ಲಿಕಾರ್ಜುನ್, ಗೋವಿನಹಾಳ್ ರುದ್ರಗೌಡ, ಕೆ.ಎನ್. ಹಳ್ಳಿಯ ವಿ. ಕುಬೇರಪ್ಪ, ಗುತ್ತೂರು ಮಂಜುನಾಥ್, ಜಿಗಳಿಯ ಈರಮ್ಮ ರುದ್ರಗೌಡ ಅವರುಗಳು ಹಾಜರಿದ್ದು, ಅವಿರೋಧ ಆಯ್ಕೆಗೆ ಸಹಕರಿಸಿದರು.

ಚುನಾವಣೆ ನಂತರ ನೂತನ ಅಧ್ಯಕ್ಷ – ಉಪಾಧ್ಯಕ್ಷರನ್ನು ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ತಾ.ಪಂ. ಮಾಜಿ ಅಧ್ಯಕ್ಷ ಬಿ.ಹೆಚ್. ತಿಪ್ರಾರುದ್ರರೆಡ್ಡಿ, ಟಿ.ಜಿ. ಮುರುಗೇಶ್, ಬಿ.ಎಸ್. ಸೋಮಸುಂದರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ. ಅಬೀದ್ ಅಲಿ, ಎಲ್.ಬಿ. ಹನುಮಂತಪ್ಪ, ತಾ.ಗ್ರಾ. ಬಿಜೆಪಿ ಅಧ್ಯಕ್ಷ  ಹಿಂಡಸಘಟ್ಟಿ ಲಿಂಗರಾಜ್, ಮುಖಂಡರಾದ ಬೆಳ್ಳೂಡಿ ಬಸವರಾಜ್, ಚಂದ್ರಶೇಖರ್ ಪೂಜಾರ್, ಬಸವರಾಜ ರೆಡ್ಡಿ, ಗಂಗನರಸಿ ನಾಗೇಂದ್ರಪ್ಪ, ಶಂಕರ್ ಖಟಾವ್ ಕರ್, ಅಮರಾವತಿ ರೇವಣಸಿದ್ದಪ್ಪ, ಕೆ.ಪಿ. ಗಂಗಾಧರ್ ಸೇರಿದಂತೆ, ಇನ್ನೂ ಅನೇಕರು ಅಭಿನಂದಿಸಿದರು.

error: Content is protected !!