ಎಲೆಬೇತೂರಿನಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ

ದಾವಣಗೆರೆ, ಜೂ.7- ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಕೊರೊನಾ ವೈರಸ್ ಹರಡಿದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆಗಿರುವುದರಿಂದ ಬಡವರಿಗೆ, ಕೂಲಿಕಾರರಿಗೆ ಕೂಲಿ ಕೆಲಸವಿಲ್ಲದೇ ಪರದಾಡುತ್ತಿದ್ದು, ದಿನನಿತ್ಯ ಅಗತ್ಯ ಸಾಮಗ್ರಿಗಳ ಆಹಾರ ಕಿಟ್‌ ಅನ್ನು ವಿತರಿಸುವ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂದು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರತ್ನಮ್ಮ ಪೂಜಾರ್‌ ಪರಶುರಾಮಪ್ಪ ಅವರು ವಹಿಸಿದ್ದರು. ಎಪಿಎಂಸಿಯ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್ ಆಹಾರ ಸಾಮಗ್ರಿಗಳ ಕಿಟ್ಟನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ  ಕಕ್ಕರಗೊಳ್ಳ ಜಿ.ಪಂ. ಸದಸ್ಯರಾದ ಶ್ರೀಮತಿ ರೇಣುಕಾ ಬಿ.ಕರಿಬಸಪ್ಪ, ದಾವಣಗೆರೆ ಉತ್ತರ ವಲಯ ಕ್ಷೇತ್ರದ ಅಧ್ಯಕ್ಷ ಪರಶುರಾಮಪ್ಪ, ಗ್ರಾಮದ ಹಿರಿಯರಾದ ಹೆಚ್.ಬಸವರಾಜಪ್ಪ, ಎಂ.ನಾಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಕರಿಬಸಪ್ಪ, ಕೊರೊನಾ ವೈರಸ್ ಜಾಗೃತಿ ಹಾಗೂ ಆಹಾರ ಸಾಮಗ್ರಿ ಕಿಟ್ ವಿತರಣೆ ಬಗ್ಗೆ ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಪ್ರಭು, ಎಪಿಎಂಸಿ ಸದಸ್ಯರುಗಳಾದ ಎಂ.ಕೆ.ರೇವಣಸಿದ್ದಪ್ಪ, ಟಿ.ರಾಜಪ್ಪ ಹಾಗೂ ಮತ್ತಿತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮವನ್ನು ಎಸ್ಎಸ್ ಮಲ್ಲಿಕಾರ್ಜುನ ಅಭಿಮಾನಿಗಳ ಬಳಗ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದರು.

error: Content is protected !!