ದಾವಣಗೆರೆ, ಜೂ. 5 – ನಗರದ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಇಂದು ಆಚರಿಸಲಾಯಿತು.ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಹೀರಾಚಂದ್ ಸೂರಿ ಸ್ವರ್ಜಿ ಮರಸಾಬ್ ಅವರು ವಹಿಸಿದ್ದರು. ಅರಣ್ಯ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿತ್ತು.
ಸುಪಾರ್ಶ್ವನಾಥಮೂರ್ತಿ ಪೂಜ್ಯ ಸಂಘದ ಅಧ್ಯಕ್ಷ ಮಹೇಂದ್ರ ಜೈನ್, ಕಾರ್ಯದರ್ಶಿ ನರೇಂದ್ರ ಜೈನ್, ಭಗವಾನ್ ಮಹಾವೀರ ಗೋಶಾಲೆಯ ಅಧ್ಯಕ್ಷ ಉತ್ತಮ್ಚಂದ್ ಜೈನ್, ಕಾರ್ಯದರ್ಶಿ ಸುರೇಶ್ ಜೈನ್, ಖಜಾಂಚಿ ಜಿತೇಂದ್ರ ಜೈನ್, ಜಂಟಿ ಕಾರ್ಯದರ್ಶಿ ಮಹಾವೀರ್ ಜೈನ್, ಪರಸ್ ಜೈನ್, ದಿನೇಶ್ ಜೈನ್, ಗೋಶಾಲೆ ಸದಸ್ಯರಾದ ರಮಣ್ಲಾಲ್ ಜೈನ್, ಚಂಪಾಲಾಲ್ ಜೈನ್, ಸಚಿನ್ ಜೈನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.