ಹರಪನಹಳ್ಳಿ, ಜೂ.5- ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಬಾಗಳಿ ಕ್ಷೇತ್ರದ ಅಶೋಕ ನಾರಾಯಣಗೌಡ ಹಾಗೂ ಉಪಾಧ್ಯಕ್ಷರಾಗಿ ತೆಲಗಿ ಕ್ಷೇತ್ರದ ಅನ್ನಪೂರ್ಣಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದ 20 ತಿಂಗಳ ಅವಧಿಗೆ ಶುಕ್ರವಾರ ನಡೆದ ಚುನಾವಣೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಡಾ. ನಾಗವೇಣಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಮಾರುಕಟ್ಟೆ ಸಮಿತಿಯ 15 ಸದಸ್ಯರಲ್ಲಿ 12 ಸದಸ್ಯರು ಹಾಜರಿದ್ದು, 3 ಸದಸ್ಯರು ಗೈರು ಹಾಜರಿದ್ದರು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಅರಸಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಭತ್ತಹಳ್ಳಿ ಎಸ್. ಮಂಜುನಾಥ, ಜಿ.ಪಂ. ಸದಸ್ಯ ಎಚ್.ಬಿ. ಪರಶುರಾಮಪ್ಪ, ಜಿಲ್ಲಾ ಗ್ರಾಮಾಂತರ ಟಾಸ್ಕ್ ಫೋರ್ಸ್ ಸಮಿತಿಯ ಜಿಲ್ಲಾ ಕಾರ್ಯಪಡೆಯ ಸದಸ್ಯ ಶಶಿಧರ್ ಪೂಜಾರ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪಿ.ಎಲ್. ಪೋಮ್ಯಾನಾಯ್ಕ, ಎಪಿಎಂಸಿ ನಿರ್ದೇಶಕರಾದ ಮುದುಗಲ್ ಗುರುನಾಥ, ಚಿಗಟೇರಿ ಜಂಬಣ್ಣ, ರೆಡ್ಡಿಗೌಡ್ರು, ಮುನಿಯಪ್ಪ, ಸುರೇಶ, ನಳಿನ, ಶಿವಪ್ಪ, ಎಚ್. ಬೀರಪ್ಪ, ಬೆನಕಶೆಟ್ಟಿ ಅಜ್ಜಪ್ಪ, ಪುರಸಭೆ ಸದಸ್ಯ ಲಾಟಿ ದಾದಾಪೀರ್, ಮುಖಂಡರಾದ ಎಚ್.ಕೆ. ಹಾಲೇಶ್, ಬಿ. ರಾಮಪ್ಪ, ಎಚ್. ದೇವರಾಜ್, ಅಲ್ಮರಸಿಕೇರಿ ಪರಶುರಾಮ, ಪಿ. ಪ್ರೇಮಕುಮಾರ, ಭರಮನಗೌಡ, ಕೊಂಗನ ಹೊಸೂರು ಶಿವಣ್ಣ, ಬೆಂಡಿ ಗೇರಿ ಹೇಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.