ಹರಿಹರ, ಜೂ.3- ಕೊರೊನಾ ವಾರಿಯರ್ಸ್ ಕರ್ತವ್ಯ ಹಾಗೂ ಜಾಗೃತಿ ಕುರಿತು ಆಯೋಜಿಸಿದ್ದ ರಾಷ್ಟ್ರಮಟ್ಟದ ಆನ್ಲೈನ್ ಪೇಂಟಿಂಗ್ ಸ್ಪರ್ಧೆಯ ಗ್ರೂಪ್ ಸಿ ವಿಭಾಗದಿಂದ ಭಾಗವಹಿಸಿದ್ದ ಪಟ್ಟಣದ ಎಂಕೆಇಟಿ ಸಿಬಿಎಸ್ಇ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿನಿ ಎಂ.ಹೆಚ್. ಮನೀಷಾ ಕಂಚಿನ ಪದಕ ಗಳಿಸಿದ್ದಾಳೆ.
ಮನೀಷಾ ರಚಿಸಿದ ಚಿತ್ರದಲ್ಲಿ ಕೊರೊನಾ ವೈರಸ್ ಕುರಿತು ಜನರನ್ನು ಜಾಗೃತಿಗೊಳಿಸುವುದು, ಕೊರೊನಾ ವಾರಿಯರ್ಸ್ಗಳ ಸೇವೆ, ಮಾಧ್ಯಮಗಳ ಕರ್ತವ್ಯ ಹಾಗೂ ರೋಗಿಗಳನ್ನು ಗೌರವದಿಂದ ನೋಡಿಕೊಳ್ಳುವ ಕುರಿತು ಹಾಗೂ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು.
ಜಾರ್ಖಂಡ್ ರಾಜ್ಯದ ರಾಂಚಿಯ ಕಲಾಕೃತಿ ಸ್ಕೂಲ್ ಆಫ್ ಆರ್ಟ್ಸ್ ಸಂಸ್ಥೆಯು ಈ ಸ್ಪರ್ಧೆಯನ್ನು ಆಯೋಜಿಸಿದ್ದು, ದೇಶದ 28 ರಾಜ್ಯಗಳ 8 ಕೇಂದ್ರಾಡಳಿತ ಪ್ರದೇಶಗಳ 429 ನಗರಗಳಿಂದ ಸುಮಾರು 2,200 ಸ್ಪರ್ಧಿಗಳು ಭಾಗವಹಿಸಿದ್ದರು.