ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ 4 ಅಡಿ ನೀರು

ಜಗಳೂರು, ಜೂ. 2 – ತಾಲ್ಲೂಕಿನಾದ್ಯಂತ ನಿನ್ನೆ ರಾತ್ರಿ 197.06 ಮಿ.ಮೀಟರ್ ಮಳೆಯಾಗಿದೆ. ತಾಲ್ಲೂಕಿನ ಆರು ಮಳೆಮಾಪನ ಕೇಂದ್ರಗಳಾದ ಜಗಳೂರು 15.03,  ಬಿಳಿಚೋಡು-123.02, ಸಂಗೇನಹಳ್ಳಿ- 16.00, ಚಿಕ್ಕ ಬಂಟನಹಳ್ಳಿ- 15 ಮಿ.ಮೀ. ಹಾಗೂ  ಸೊಕ್ಕೆ 28.01ಮಿ.ಮೀ. ಮಳೆಯಾಗಿದೆ. ತಾಲ್ಲೂಕಿನ ಅತೀ ದೊಡ್ಡ ತುಪ್ಪದಹಳ್ಳಿ ಕೆರೆಗೆ ಒಂದೇ ರಾತ್ರಿ ಸುಮಾರು ನಾಲ್ಕು ಅಡಿ ನೀರು ಬಂದಿದೆ. ಈ ಭಾಗದಲ್ಲಿ ಗೋಕಟ್ಟೆ, ಚೆಕ್ ಡ್ಯಾಮ್ ಗಳು ತುಂಬಿಹರಿಯುತ್ತಿವೆ. ಸೊಕ್ಕೆ ಹೋಬಳಿ  ಮತ್ತು ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ರೋಹಿಣಿ ಮಳೆ ವ್ಯಾಪಕವಾಗಿ ಬಂದಿದೆ.

error: Content is protected !!