ದೇವನಾಯಕನಹಳ್ಳಿಯ ನಲ್ಲಿ ನೀರಿನಲ್ಲಿ ಸಹಸ್ರಪದಿ

ಹೊನ್ನಾಳಿ, ಜೂ.2- ತಾಲ್ಲೂಕಿನ ಎಚ್. ಕಡದಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಪಟ್ಟಣಕ್ಕೆ ಸಮೀಪದ ದೇವನಾಯಕನಹಳ್ಳಿಯ ನಲ್ಲಿ ನೀರಿನಲ್ಲಿ ಸಹಸ್ರಪದಿ ಹುಳು (ಜರಿ) ಗಳು ಕಂಡುಬರುತ್ತಿದ್ದು, ನೀರನ್ನು ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ.

ನಲ್ಲಿಯಲ್ಲಿ ಹೊಳೆ ನೀರು ಮತ್ತು ಕೊಳವೆ ಬಾವಿ ನೀರು ಬೇರೆ ಬೇರೆ ಅವಧಿಗಳಲ್ಲಿ ಪೂರೈಕೆಯಾಗುತ್ತದೆ. ಎರಡೂ ಸಂದರ್ಭಗಳಲ್ಲೂ ಹುಳುಗಳು ಬರುತ್ತವೆ. ಈ ಬಗ್ಗೆ ಎಚ್. ಕಡದಕಟ್ಟೆ ಗ್ರಾ.ಪಂ ಜನಪ್ರತಿನಿಧಿಗಳು, ಅಧಿಕಾರಿ-ಸಿಬ್ಬಂದಿಗೆ ಅನೇಕ ಬಾರಿ ತಿಳಿಸಿದ್ದರೂ ಯಾರೂ ಇತ್ತ ಗಮನ ಹರಿಸಿಲ್ಲ. ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಗಂಟೆಗಟ್ಟಲೇ ಮಾರು ದ್ದದ ಭಾಷಣ ಬಿಗಿಯುವವರು, ಸ್ವಚ್ಛತೆ ಕಾಪಾಡಿ ಎಂದು ಜನರಿಗೆ ಹೇಳುವ ವರು ಮೊದಲು ಈ ಸಮಸ್ಯೆಯತ್ತ ದೃಷ್ಟಿಹರಿಸಬೇಕು ಎಂದು ಸಂಬಂಧ ಪಟ್ಟವರನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.

error: Content is protected !!