ಹರಿಹರ, ಮೇ 30- ನಗರದ ಗಿರಿಯಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿ ಹಲವು ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದಿರುವ ಪ್ರಾಂಶುಪಾಲ ಎಸ್. ಹೆಚ್. ಪ್ಯಾಟಿ ಅವರಿಗೆ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಸನ್ಮಾನಿಸಿ, ಗೌರವಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಪಾಪಣ್ಣ, ಸಮಿತಿಯ ಸದಸ್ಯ ಪ್ರಸನ್ನ ವಕೀಲರು, ಉದ್ಯಮಿ ಸತ್ಯನಾರಾಯಣ ರಾವ್, ರತ್ನಮ್ಮ ಮತ್ತು ಇತರರು ಹಾಜರಿದ್ದರು.
January 23, 2025