ಪ್ರಧಾನಿ ಮೋದಿ ಜಗಮೆಚ್ಚಿದ ಮಗ

ರಾಣೇಬೆನ್ನೂರಿನಲ್ಲಿ ಶಾಸಕ ಅರುಣಕುಮಾರ್

ರಾಣೇಬೆನ್ನೂರು, ಮೇ 29- ಕೊರೊನಾ ವೈರಸ್ ಮಹಾಮಾರಿ ಹರಡದಂತೆ ತಡೆಯುವಲ್ಲಿ ಕೈಗೊಂಡ ಕಾರ್ಯಕ್ರಮಗಳಿಂದ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಗತ್ತಿನ ಎಲ್ಲರಿಂದ ಪ್ರಶಂಸೆಗೊಳ ಗಾಗಿ ಜಗಮೆಚ್ಚಿದ ಮಗ ಆಗಿದ್ದಾರೆ ಎಂದು ಶಾಸಕ ಅರುಣಕುಮಾರ್ ಪೂಜಾರ ಹೇಳಿದರು.

ತಾಲ್ಲೂಕಿನ ಕುದರಿಹಾಳ, ಹರನಗಿರಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ ಹಾಗೂ ರಸ್ತೆ ಕಾಂಕ್ರೀಟ್ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಪ್ರಧಾನ ಮಂತ್ರಿ ಮೋದಿ ಅವರು ಎರಡನೇ ಅವಧಿಯ ಎರಡನೇ ವರ್ಷ ವನ್ನು ನಾಳೆಗೆ ಪೂರ್ಣಗೊಳಿಸಲಿದ್ದು, ದೇಶ ಹಾಗೂ ದೇಶದ ಜನರ ಚಿಂತನೆಯೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಜನರ ಪ್ರೀತಿ ಗಳಿಸಿದ್ದಾರೆ ಎಂದರು.

ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ,  ಎಪಿಎಂಸಿ ನಿರ್ದೇಶಕ ಬಸವರಾಜ ಹುಲ್ಲತ್ತಿ, ಜಿಪಂ ಸದಸ್ಯ ರಾಥೋಡ, ತಾಪಂ ಸದಸ್ಯ ನೀಲಕಂಠಪ್ಪ ಕುಸಗೂರ, ಬಿಜೆಪಿ ಮುಖಂಡರಾದ ಮಂಜುನಾಥ ಓಲೇಕಾರ, ವಿಶ್ವನಾಥ ಪಾಟೀಲ ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.

error: Content is protected !!