ವಿಕಲತೆಯಿಂದ ವಿಚಲಿತರಾಗದೆ ನೈಪುಣ್ಯತೆಯಿಂದ ಬದುಕು ಕಟ್ಟಿಕೊಳ್ಳಿ

ಹರಪನಹಳ್ಳಿಯ ಕಾರ್ಯಕ್ರಮದಲ್ಲಿ ಜಿ.ಕರುಣಾಕರ ರೆಡ್ಡಿ

ಹರಪನಹಳ್ಳಿ, ಮೇ 29- ವಿಕಲಚೇತನರ ಶ್ರೇಯೋ ಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ವಿಕಲತೆಯಿಂದ ವಿಚಲಿತರಾಗದೆ ನೈಪುಣ್ಯತೆಯಿಂದ ಬದುಕು ಕಟ್ಟಿಕೊಂಡು  ಅವುಗಳ ಸದುಪಯೋಗ ಪಡೆದು ಸಾಧನೆಗೆ ಮುಂದಾಗ ಬೇಕು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ತಾಲ್ಲೂಕು ಪಂಚಾ ಯ್ತಿಯ ಅನಿರ್ಬಂಧಿತ ಯೋಜನೆಯ ವಿಕಲಚೇತನರ ಶೇ.5 ರ ಅನುದಾನದಡಿ 94 ವಿಕಲಚೇತನರಿಗೆ ವಿದ್ಯುತ್‍ ಚಾಲಿತ ಹೊಲಿಗೆ ಯಂತ್ರಗಳನ್ನು ಮತ್ತು ರಾಜ್ಯ ವಲಯ ಮೀನುಗಾರಿಕೆ ಇಲಾಖೆಯ ಸಲಕರಣೆ, ಕಿಟ್‌ ಯೋಜನೆ ಯಡಿ ಆಯ್ಕೆಯಾದ 5 ಫಲಾನುಭವಿಗಳಿಗೆ ಮೀನುಗಾರಿಕಾ ಸಲಕರಣೆ ಕಿಟ್ ವಿತರಣೆ, ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಪ್ರಯೋಗಾಲಯ ಮತ್ತು ಎಪಿಎಂಸಿ ಸಭಾಂಗಣದ ನೂತನ ಕಟ್ಟಡಗಳ ಉದ್ಘಾಟನೆ, ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ನೀರು ನುಗ್ಗಿದ್ದ ಪಟ್ಟಣದ ಹಳ್ಳದ ದುರುಗಮ್ಮನ ದೇವಸ್ಥಾನ, ತೆಗ್ಗಿನ ಮಠ, ಬಿಎಸ್‍ಎನ್‍ಎಲ್‌ ಕಛೇರಿ, ದೂರದರ್ಶನ ಕೇಂದ್ರ, ಡಿವೈಎಸ್ಪಿ ಕಛೇರಿಯ ಸುತ್ತಮುತ್ತಲಿನ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.

ಇಂದು ಎಲ್ಲಾ ಕ್ಷೇತ್ರಗಳಲ್ಲಿ ವಿಕಲಚೇತನರಿಗೆ ವಿಶೇಷ ಮೀಸಲಾತಿಯನ್ನು ಕಲ್ಪಿಸಲಾಗಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆಗೆ ಮುಂದಾಗಬೇಕು. ಪೋಲಿಯೋ ಮುಕ್ತ ರಾಷ್ಟ್ರವಾಗುವುದರತ್ತ ನಮ್ಮ ದೇಶ ಸಾಗುತ್ತಿದೆ ಎಂದು ಅವರು ಹೇಳಿದರು.

ಅನ್ನದಾತರ ಬದುಕು ಇಂದು ಲಾಟರಿಯಂತಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ರೈತರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಎಪಿಎಂಸಿ ಪ್ರಾಂಗಣದಲ್ಲಿ ರಾಗಿ ಖರೀದಿಸಿ ಹರಿಹರಕ್ಕೆ ಕಳಿಸುತ್ತಿದ್ದರು. ಅದನ್ನು ತಡೆದು ರೈತರ ಅನುಕೂಲಕ್ಕಾಗಿ 500 ಮೆಟ್ರಿಕ್ ಟನ್ ಗೋದಾಮಿನಲ್ಲಿಡುವಂತೆ ಸೂಚಿಸಲಾಗಿದ್ದು, ಶೀಘ್ರ ಕಾರ್ಯರೂಪಕ್ಕೆ ಬರಲಿದೆ ಎಂದರು. 

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಮಂಜಾನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ  ಕೆಂಚನಗೌಡ, ಬಿಜೆಪಿ ತಾಲ್ಲೂಕು ಘಟಕದ ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ,  ಬಿಜೆಪಿ ಎಸ್.ಟಿ. ಘಟಕದ ತಾಲ್ಲೂಕು ಅಧ್ಯಕ್ಷ ಆರ್.ಲೋಕೇಶ್,  ಎಪಿಎಂಸಿ ಅಧ್ಯಕ್ಷ ತಾವರಾನಾಯ್ಕ, ಕಾರ್ಯದರ್ಶಿ ಈರಣ್ಣ, ಡಿವೈಎಸ್ಪಿ ಮಲ್ಲೇಶ್‌ ದೊಡ್ಮನಿ, ಸಿಪಿಐ ಕೆ.ಕುಮಾರ್, ಪಿಎಸ್‍ಐ ಸಿ. ಪ್ರಕಾಶ್, ಇಒ ಅನಂತರಾಜು, ಮುಖ್ಯಾಧಿಕಾರಿ ಬಿ.ಆರ್.ನಾಗರಾಜ್ ನಾಯ್ಕ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಟಿ. ನಾಗರಾಜ್ ಶಿಂಗ್ರಿಹಳ್ಳಿ,  ರಹಮತ್‌ವುಲ್ಲಾ,  ಎಂ.ಆರ್.ಡಬ್ಲೂ ಧನರಾಜ್, ಪುರಸಭೆ ಸದಸ್ಯರಾದ ಎಂ.ಕೆ.ಜಾವೀದ್, ಮಂಜುನಾಥ ಇಜಂತರ್, ವಕೀಲ ಕೆಂಗಳ್ಳಿ ಪ್ರಕಾಶ್, ಮುಖಂಡರಾದ ಶಿವಾನಂದ್, ಯು.ಪಿ.ನಾಗರಾಜ್, ರಾಘ ವೇಂದ್ರ ಶೆಟ್ಟಿ, ಸಂತೋಷ್ ಸೇರಿದಂತೆ ಇತರರು ಇದ್ದರು.

error: Content is protected !!