ಮಲೇಬೆನ್ನೂರು, ಮೇ 28- ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಇಲ್ಲಿನ ಪುರಸಭೆಯ ಪೌರ ಕಾರ್ಮಿಕರಿಗೆ, ಸಿಬ್ಬಂದಿಗಳಿಗೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪಟ್ಟಣದ ಬ್ಯೂಟಿ ಪಾರ್ಲರ್ ಮಾಲೀಕರು ನಿನ್ನೆ ಬೆಳಿಗ್ಗೆ ಉಪಹಾರದ ವ್ಯವಸ್ಥೆ ಮಾಡಿದ್ದರು.
ಲಾಕ್‌ಡೌನ್‌ನಿಂದಾಗಿ ಕಳೆದ 2 ತಿಂಗಳಿನಿಂದ ಬ್ಯೂಟಿ ಪಾರ್ಲರ್ ಬಂದ್ ಆಗಿ ಸಂಕಷ್ಟದಲ್ಲಿದ್ದರೂ ಕೊರೊನಾ ವಾರಿಯರ್ಸ್‌ಗಳಿಗೆ ಉಪ ಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯರಾದ ಎ. ಆರೀಫ್ ಅಲಿ, ಮಾಸಣಗಿ ಶೇಖರಪ್ಪ, ಬಿ. ಸುರೇಶ್, ಅಧಿಕಾರಿಗಳಾದ ಗುರುಪ್ರಸಾದ್, ನವೀನ್, ಗ್ರಾ.ಪಂ ಮಾಜಿ ಸದಸ್ಯ ಪಿ.ಆರ್. ರಾಜು, ಭೋವಿ ಶಿವು, ಬ್ಯೂಟಿ ಪಾರ್ಲರ್ ಮಾಲೀಕರಾದ ಯಲವಟ್ಟಿಯ ವನಜಾಕ್ಷಿ ಬಾಯಿ, ಎನ್.ವಿ. ಶೋಭಾ, ಎಸ್. ರೇಣುಕಾ, ಎನ್.ವಿ ಮಂಜುಳಾ, ಸ್ವಪ್ನ, ಎಸ್. ಸೌಜನ್ಯ, ಆರ್ಫಿನ್‌ಬಾನು, ರೇಷ್ಮ ಭಾಗವಹಿಸಿದ್ದರು.
ಚರಂಡಿ ಸ್ವಚ್ಛತೆ : ಇಲ್ಲಿನ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ (ಕುಂಬಳೂರು ಕಡೆಗೆ) ಚರಂಡಿಗಳು ಹೂಳು ತುಂಬಿಕೊಂಡಿದ್ದವು. ಈ ಬಗ್ಗೆ ಸಾರ್ವಜನಿ ಕರು ಮಾಡಿದ ಮನವಿಗೆ ತಕ್ಷಣ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಅವರು ಜೆ.ಸಿ.ಬಿ ಮೂಲಕ ಚರಂಡಿ ಸ್ವಚ್ಛಗೊಳಿಸಿದರು.