ಜೆಜೆಎಂಎಂಸಿ ಕಾಲೇಜಿನಲ್ಲಿ ಕೋವಿಡ್ ಲ್ಯಾಬ್ ಆರಂಭ

ದಾವಣಗೆರೆ, ಮೇ 26-  ನಗರದ ಜಯದೇವ ಜಗದ್ಗುರು ಮುರುಘಾರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ (ಜೆಜೆಎಂಎಂಸಿ)ದಲ್ಲಿ ಮಂಗಳ ವಾರ ಕೋವಿಡ್ -19 ಪರೀಕ್ಷಾ ಕೇಂದ್ರಕ್ಕೆ  ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಚಾಲನೆ ನೀಡಿದರು.

ಕಾಲೇಜಿನ ಸಭಾಂಗಣದಲ್ಲಿ ನಡೆದ ಸರಳ ಕಾರ್ಯ ಕ್ರಮದಲ್ಲಿ ಮಾತನಾಡಿದ ಸಚಿವರು, ದಾವಣಗೆರೆಯಲ್ಲಿ ಪರೀಕ್ಷಾ ಲ್ಯಾಬ್ ಆರಂಭಿಸಬೇಕೆಂಬ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಈಗಾಗಲೇ ಎಸ್‍ಎಸ್‍ಐಎಂಎಸ್ ಅಂಡ್ ಆರ್‍ಸಿಯಲ್ಲಿ ಆರಂಭಿಸಲಾಗಿದೆ. ಕೋವಿಡ್ ಶಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ರಡು  ಕೇಂದ್ರಗಳ ಆರಂಭಕ್ಕೆ ಚಿಂತನೆ ನಡೆಸಲಾಗಿತ್ತು. ಡಾ.ಶಾಮನೂರು ಶಿವಶಂಕರಪ್ಪನವರು ಮತ್ತು ಛೇರ್ಮನ್  ಎಸ್.ಎಸ್.ಮಲ್ಲಿಕಾರ್ಜುನ್ ಅವರು ಲ್ಯಾಬ್ ಆರಂಭಕ್ಕೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಇಂದು ಮತ್ತೊಂದು ಲ್ಯಾಬ್ ಆರಂಭಿಸಲಾಗುತ್ತಿದೆ ಎಂದರು.

ಲ್ಯಾಬ್ ಆರಂಭಕ್ಕೆ ಆಸಕ್ತಿದಾಯಕವಾಗಿ ಕಾರ್ಯನಿರ್ವಹಿಸಿದ ಜೆಜೆಎಂಎಂಸಿಯ ಪ್ರಾಂಶು ಪಾಲ ಡಾ. ಎಸ್.ಬಿ.ಮುರುಗೇಶ್, ಆಡಳಿತಾಧಿ ಕಾರಿ ಸತ್ಯನಾರಾಯಣ, ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ|| ಕುಮಾರ್ ಹಾಗೂ ಸಿಬ್ಬಂದಿ ವರ್ಗದವರನ್ನು ಸಚಿವರು ಅಭಿನಂದಿಸಿದರು.

ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್‍ಎಸ್‍ಐ ಎಂಎಸ್ ಅಂಡ್ ಆರ್‍ಸಿ ಮತ್ತು ಜೆಜೆಎಂಎಂಸಿ ಎರಡು ಕಡೆ ಲ್ಯಾಬ್ ಅವಕಾಶ ನೀಡಿ, ಉದ್ಘಾಟಿಸಿದ ಸಚಿವರನ್ನು ಅಭಿನಂದಿಸಿದರು. 

ಶಾಸಕರುಗಳಾದ ಎಸ್.ಎ.ರವೀಂದ್ರನಾಥ್, ಪ್ರೊ. ಲಿಂಗಣ್ಣ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಜೆ.ಎನ್.ಶ್ರೀನಿವಾಸ್, ವಿನಾಯಕ ಪೈಲ್ವಾನ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ ಎಸ್‍ಎಸ್‍ಐಎಂಎಸ್ ಅಂಡ್ ಆರ್‍ಸಿಯ ವೈದ್ಯಕೀಯ ನಿರ್ದೇಶಕ ಡಾ|| ಎನ್.ಕೆ.ಕಾಳಪ್ಪನವರ್, ಪ್ರಾಂಶುಪಾಲ ಡಾ|| ಬಿ. ಎಸ್.ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!