ಹೆಡ್ ಕಾನ್ಸ್ಟೇಬಲ್ ಸೇರಿ 15 ಜನ ಬಿಡುಗಡೆ
ದಾವಣಗೆರೆ, ಮೇ 26 – ನಗರದಲ್ಲಿ ಮಂಗಳವಾರದಂದು 15 ಜನರು ಕೊರೊನಾದಿಂದ ಚೇತರಿಸಿಕೊಂಡು ಬಿಡುಗಡೆ ಯಾಗಿದ್ದಾರೆ. ಇದೇ ದಿನದಂದು 11 ಜನರು ಕೊರೊನಾ ಸೋಂಕು ಹೊಂದಿರುವುದು ದೃಢಪಟ್ಟಿದೆ.
ಸೋಂಕಿಗೆ ಗುರಿಯಾಗಿರುವ ವರ ಪೈಕಿ ಎಂಟು ಜನರು ಈಗಾ ಗಲೇ ಸೋಂಕು ಹೊಂದಿರುವ ಸಂಪರ್ಕದಲ್ಲಿರುವವರಾಗಿದ್ದಾರೆ. ಉಳಿದ ಮೂವರಲ್ಲಿ ಒಬ್ಬರು ಗುಜರಾತ್ನಿಂದ ಮರಳಿದವರು, ಒಬ್ಬರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಇನ್ನೊಬ್ಬರು ಫ್ಲೂ ಲಕ್ಷಣಗಳನ್ನು ಹೊಂದಿದ್ದವರಾಗಿದ್ದಾರೆ.
ರೋಗಿ ಸಂಖ್ಯೆ ಪಿ – 933 ಸಂಪರ್ಕಕ್ಕೆ ಬಂದ ಇಬ್ಬರಿಗೆ, ಪಿ – 993 ಸಂಪರ್ಕಕ್ಕೆ ಬಂದ ಒಬ್ಬರು, ಪಿ – 627 ಸಂಪರ್ಕಕ್ಕೆ ಬಂದ ಒಬ್ಬರು ಹಾಗೂ ಪಿ -1378 ಸಂಪರ್ಕಕ್ಕೆ ಬಂದ ನಾಲ್ವರಿಗೆ ಸೋಂಕು ತಗುಲಿದೆ.
15 ಜನರ ಬಿಡುಗಡೆ : ಇಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಕೊರೊನಾದಿಂದ ಗುಣಮುಖರಾದ 15 ಜನರನ್ನು ಐಜಿಪಿ ಎಸ್. ರವಿ , ಎಸ್ಪಿ ಹನುಮಂತರಾಯ, ಎಎಸ್ಪಿ ರಾಜೀವ್, ಎಡಿಸಿ ಪೂಜಾರ್ ಹಾಗೂ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಪುಷ್ಪ ಎರಚಿ, ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡುಗೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 136 ಪ್ರಕರಣಗಳ ಪೈಕಿ 65 ಜನರು ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈಗ ಒಟ್ಟು 67 ಸಕ್ರಿಯ ಪ್ರಕರಣಗಳಿವೆ.