ದಾವಣಗೆರೆ, ಮೇ 23- ಕೋವಿಡ್-19 ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರ ಸಮುದಾಯಕ್ಕೆ ಸರ್ಕಾರದ ವತಿಯಿಂದ ಆರ್ಥಿಕ ನೆರವು ನೀಡಬೇಕಾಗಿ ಜಿಲ್ಲಾಧಿಕಾರಿಗಳಿಗೆ ವಕೀಲರ ಸಂಘವು ಮನವಿ ಮಾಡಿದೆ.
ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳು ಸಂಪೂರ್ಣವಾಗಿ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿದ್ದು, ಹಿರಿಯ ಹಾಗೂ ಕಿರಿಯ ವಕೀಲರುಗಳಿಗೆ ಆದಾಯವಿಲ್ಲದಂತಾಗಿದೆ. ವಕೀಲರುಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು, ದಿನದ ಜೀವನ ನಡೆಸುವುದೇ ಕಷ್ಟವಾಗಿದೆ. ರಾಜ್ಯ ಸರ್ಕಾರ ವಕೀಲರ ನೆರವಿಗೆ ಧಾವಿಸುವಂತೆ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರಿಗೆ ಈ ಮೂಲಕ ಮನವಿ ಸಲ್ಲಿಸಿರುವುದಾಗಿ ಅಧ್ಯಕ್ಷ ಎನ್.ಟಿ. ಮಂಜುನಾಥ್, ಕಾರ್ಯದರ್ಶಿ ಬಿ.ಎಸ್. ಲಿಂಗರಾಜ್ ತಿಳಿಸಿದ್ದಾರೆ. ಉಪಾಧ್ಯಕ್ಷ ಹೆಚ್. ದಿವಾಕರ್, ಸಹ ಕಾರ್ಯದರ್ಶಿ ಎಸ್. ಬಸವರಾಜ್, ವಕೀಲರಾದ ಹೆಚ್.ಎಸ್. ಯೋಗೇಶ್, ವಿ. ಗೋಪಾಲ್, ನರೇಂದ್ರಬಾಬು, ಎ.ಸಿ. ರಾಘವೇಂದ್ರ, ಎ.ಎಸ್. ಮಂಜುನಾಥ್ ಹಾಗೂ ಇನ್ನಿತರರಿದ್ದರು.