ಮಲೇಬೆನ್ನೂರು, ಮೇ 20- ಶಾಸಕ ಎಸ್. ರಾಮಪ್ಪ ಅವರು ಬುಧವಾರವೂ ಪಟ್ಟಣದ ಗೌಸ್ ನಗರ, ಟಿಪ್ಪುನಗರ ಮತ್ತು ಭೋವಿ ಕಾಲೋನಿಯ ಜನರಿಗೆ ಫುಡ್ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ದರು. ಮಂಗಳವಾರ ಆಶ್ರಯ ಕಾಲೋನಿ, ಜಟ್‌ಪಟ್ ನಗರದಲ್ಲಿ ಪುಡ್ ಕಿಟ್ ನೀಡಿದ್ದ ಶಾಸಕರು, ಗುರುವಾರ ಬೆಳಿಗ್ಗೆ ಬಸವೇಶ್ವರ ಬಡಾವಣೆ, ಅಜಾದ್ ನಗರ, ಇಂದಿರಾ ನಗರದಲ್ಲಿ ವಿತರಣೆ ಮಾಡಲಿದ್ದಾರೆ. ಪಟ್ಟಣದಲ್ಲಿ ಈಗಾಗಲೇ 1200 ಕಿಟ್ ವಿತರಿಸಿದ್ದು, ಇನ್ನೂ 2 ಸಾವಿರ ಕುಟುಂಬಗಳಿಗೆ ನೀಡಲಿದ್ದೇವೆ ಎಂದು ಶಾಸಕ ರಾಮಪ್ಪ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಎಪಿಎಂಸಿ ನಿರ್ದೇಶಕ ಜಿ. ಮಂಜುನಾಥ್ ಪಟೇಲ್, ಮುಖಂಡರಾದ ಎಂ.ಬಿ. ರೋಷನ್, ವಿ. ವೀರಯ್ಯ, ಸೈಯದ್ ಜಾಕೀರ್, ಪುರಸಭೆ ಸದಸ್ಯರಾದ ಎ. ಆರೀಫ್ ಅಲಿ, ಭೋವಿಕುಮಾರ್, ಜಿಯಾವುಲ್ಲಾ, ಭೋವಿ ಶಿವು, ಜಾಫರ್, ಷಹಬುದ್ದೀನ್, ರುಸ್ತುಂ ಅಲಿ, ಸಾಬೀರ್ ಜಯಸಿಂಹ, ಫಾಜಿಲ್‌ಖಾನ್ ಮತ್ತಿತರರು ಫುಡ್ ಕಿಟ್ ವಿತರಣೆಯಲ್ಲಿ ಭಾಗವಹಿಸಿದ್ದರು.