ದಾವಣಗೆರೆ, ಮೇ 20- ಹರಿಹರ ಮತ್ತು ದಾವಣಗೆರೆ ನಗರಗಳ ಬಟ್ಟೆ ಅಂಗಡಿಗಳ ಮುಂದೆ ಕಿಡಿಗೇಡಿ ಯುವಕರ ಗುಂಪು ನಿಂತು ಮಹಿಳೆಯರಿಗೆ ಹಿಂದೂಗಳ ಅಂಗಡಿಗಳಿಗೆ ಹೋಗಬಾರದು ಎಂದು ತಾಕೀತು ಮಾಡಿದ್ದು, ಇದರಿಂದ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ಉಂಟಾಗಲಿದೆ. ಕೂಡಲೇ ತಪ್ಪಿತಸ್ಥ ಯುವಕರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಲು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಒತ್ತಾಯಿಸಿವೆ.
ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರವೀಂದ್ರ, ಪ್ರಭು ಕಲ್ಬುರ್ಗಿ, ಕೆ. ಹನುಮಂತಪ್ಪ, ಕೆ.ಎನ್. ಓಂಕಾರಪ್ಪ, ಎನ್. ಮಲ್ಲೇಶ್, ಜಿ.ಎ. ಗುರು ಜೊಳ್ಳಿ ಮನವಿ ಮಾಡಿದ್ದಾರೆ