ಹರಪನಹಳ್ಳಿಯ ಕಾರ್ಯಕ್ರಮದಲ್ಲಿ ಎಂ.ಪಿ.ಲತಾ
ಹರಪನಹಳ್ಳಿ, ಮೇ 20- ಮಹಾಮಾರಿ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಅವಿರತವಾಗಿ ಶ್ರಮಿಸುತ್ತಾ, ಮಾನವ ಸಂತತಿ ಉಳಿವಿಗೆ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್‌ಗಳನ್ನು ಪ್ರತಿಯೊಬ್ಬರೂ ಗೌರವಿಸ ಬೇಕು ಎಂದು ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಕರೆ ನೀಡಿದರು.
ಪಟ್ಟಣದ ಹಳೇ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನದಿಂದ ಏರ್ಪ ಡಿಸಲಾಗಿದ್ದ ಆಶಾ ಕಾರ್ಯಕರ್ತೆಯರಿಗೆ ಹಾಗೂ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆಹಾರದ ಕಿಟ್ ಮತ್ತು ಸುರಕ್ಷಾ ಸಾಧನಗಳನ್ನು ವಿತರಿಸಿ ಮಾತನಾಡಿದರು.
ಕೊರೊನಾ ವಾರಿಯರ್ಸ್‌ಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಇವರ ಸೇವೆಯನ್ನು ಪ್ರತಿಯೊ ಬ್ಬರೂ ಮರೆಯಬಾರದು. ಅವರ ಕರ್ತವ್ಯಕ್ಕೆ ಗೌರವ ಕೊಡುವ ಕೆಲಸವನ್ನು ಮಾಡಬೇಕು. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪ್ರಭಾರಿ ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್, ಪಟ್ಟಣದ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಟಿ.ಹೆಚ್.ಎಂ.ಮಂಜು ನಾಥ್, ನಿರ್ದೇಶಕ ಎಂ.ವಿ.ಕೃಷ್ಣ ಕುಮಾರ್, ಮುಖಂಡರಾದ ಅಡವಿಹಳ್ಳಿ ದಕ್ಷಿಣಮೂರ್ತಿ, ಡಿ.ರಾಜಕುಮಾರ್, ಮಟ್ಟಿ ಮುತ್ತಣ್ಣ, ಓ.ಮಹಾಂತೇಶ್, ಉದಯಶಂಕರ್, ಮತ್ತೂರು ಬಸವರಾಜ್, ರಾಜು ಪೂಜಾರ್, ರಾಯದುರ್ಗ ವಾಗೀಶ್, ಕವಿತಾ ಸುರೇಶ್, ಉಮಾಶಂಕರ್, ಎನ್.ಶಂಕರ್, ಆನಂದ, ಟಿ.ಗುರು, ವಿಕ್ರಂ, ರವಿಕುಮಾರ್ ಹಾಗೂ ಇನ್ನಿತರರಿದ್ದರು.