ಜಗಳೂರು, ಮೇ 20- ತಾಲ್ಲೂಕಿನ ಪಶು ಇಲಾಖೆಯ ವತಿಯಿಂದ ಜಾನುವಾರುಗಳಿಗೆ ಜಂತು ನಾಶಕ ಮತ್ತು ಲವಣ ಮಿಶ್ರಿತ ಔಷಧಿಯನ್ನು ಜಗ ಳೂರಿನ ಪಶು ಆಸ್ಪತ್ರೆಯಲ್ಲಿ ಸಹಾಯಕ ನಿರ್ದೇಶಕ ಡಾ.ಕೆ.ಬಿ ಲಿಂಗರಾಜ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಮುಂದಿನ ತಿಂಗಳು ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಲಾಗುತ್ತದೆ. ಆದ್ದರಿಂದ ಜಾನುವಾರುಗಳ ಹೊಟ್ಟೆಯಲ್ಲಿರುವ ಜಂತು ಹುಳುಗಳನ್ನು ನಾಶ ಪಡಿಸುವ ಸಲುವಾಗಿ ಜಂತು ನಾಶಕ ಮತ್ತು ಲವಣ ಮಿಶ್ರಿತ ಔಷಧಿಯನ್ನು ಕೊಡಲಾಗುತ್ತದೆ. ಔಷಧಿ ಕೊಡುವುದರಿಂದ ಜಾನುವಾರುಗಳ ಆರೋಗ್ಯ ಚೆನ್ನಾಗಿರುತ್ತೆ. ಪೌಷ್ಟಿಕಾಂಶಯುತವಾಗಿ ಜಾನುವಾರು ಗಳು ಅತಿ ಹೆಚ್ಚು ಮೇವನ್ನು ತಿನ್ನುತ್ತವೆ. ಆದ್ದರಿಂದ ತಾಲ್ಲೂಕಿನ ಎಲ್ಲಾ ರೈತರು ಸಂಬಂಧಪಟ್ಟ ಪಶು ಆಸ್ಪತ್ರೆಗಳಿಗೆ ಔಷಧಿಯನ್ನು ಕೊಡಲಾಗುತ್ತದೆ. ಆದ್ದರಿಂದ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಶುವೈದ್ಯರಾದ
ಡಾ. ರಾಮಚಂದ್ರಪ್ಪ, ಡಾ. ಮಹದೇವಪ್ಪ, ಶಾಂತಕುಮಾರ್, ಪಶು ಇಲಾಖೆಯ ಎಲ್ಲಾ ಸಿಬ್ಬಂದಿಗಳು ಮತ್ತು ರೈತರು ಭಾಗವಹಿಸಿದ್ದರು.