ಲಾಕ್‌ಡೌನ್ ಸಡಿಲಿಕೆ ಆಗಿದೆಯೆಂದು ಮೈಮರೆಯಬೇಡಿ : ಶಾಸಕ ರಾಮಪ್ಪ

ಮಲೇಬೆನ್ನೂರು, ಮೇ 19- ಪಟ್ಟಣದ 2 ಸಾವಿರ ಬಡ ಕುಟುಂಬಗಳಿಗೆ ಆಹಾರ ಪದಾರ್ಥ ಗಳ ಕಿಟ್ ಜೊತೆಗೆ 2 ಮಾಸ್ಕ್, ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮಕ್ಕೆ ಆಶ್ರಯ ಕಾಲೋನಿ ಯಲ್ಲಿ ಶಾಸಕ ಎಸ್.ರಾಮಪ್ಪ ಚಾಲನೆ ನೀಡಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು, ಸತತ 17ದಿನ ಹರಿಹರ ನಗರದಲ್ಲಿ 16 ಸಾವಿರ ಫುಡ್‌ಕಿಟ್ ವಿತರಣೆ ಮಾಡಿದ್ದು, ಇನ್ನೂ 4 ಸಾವಿರ ಕುಟುಂಬಗಳಿಗೆ ವಿತರಣೆ ಮಾಡಬೇಕಿದೆ.
ಮಲೇಬೆನ್ನೂರಿನ ಆಶ್ರಯ ಕಾಲೋನಿ, ಭೋವಿ ಕಾಲೋನಿ, ಎ.ಕೆ. ಕಾಲೋನಿ, ವಾಲ್ಮೀಕಿ ಬಡಾವಣೆ, ಜಟ್‌ಫಟ್ ನಗರ, ಟಿಪ್ಪು ನಗರ, ಗೌಸ್ ನಗರ, ಇಂದಿರಾ ನಗರ, ಆಜಾದ್ ನಗರದ ಎಲ್ಲಾ ನಿವಾಸಿಗಳಿಗೂ ಫುಡ್‌ಕಿಟ್ ನೀಡಲಾಗುವುದು ಎಂದು ಅವರು ತಿಳಿಸಿದರು.

3 ಲಕ್ಷ ರೂ. ವೆಚ್ಚದ ಮಾಸ್ಕ್ ಮತ್ತು 2 ಲಕ್ಷ ರೂ. ವೆಚ್ಚದ ಸ್ಯಾನಿಟೈಸರ್ ಬಾಟಲ್‌ಗಳನ್ನು ಖರೀದಿಸಿ, ಫುಡ್‌ಕಿಟ್ ಜೊತೆಗೆ ನೀಡಲಾಗಿದ್ದು, ಜನರು ಲಾಕ್‌ಡೌನ್ ಸಡಿ ಲಿಕೆ ಆಗಿದೆ ಎಂದು ಮೈಮರೆ ಯದೆ ಎಚ್ಚರದಿಂದಿರಬೇಕು. ಕೊರೊನಾ ವೈರಸ್ ಹೋಗಿಲ್ಲ. ನಮ್ಮ ಜೊತೆ ಇದೆ. ಹಾಗಾಗಿ ಮಾಸ್ಕ್ ಧರಿಸುವುದು, ಸಾಮಾ ಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಪದೇ ಪದೇ ಕೈ ತೊಳೆಯುವುದನ್ನು ಕಡ್ಡಾಯವಾಗಿ ಮಾಡಬೇಕೆಂದು ರಾಮಪ್ಪ ಮನವಿ ಮಾಡಿದರು.

ಬೆಳೆ ಹಾನಿಗೆ ಶೀಘ್ರ ಪರಿಹಾರ : ಮಲೇಬೆನ್ನೂರು ಹೋಬಳಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಸುಮಾರು 1800 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ಜೊತೆಗೆ ಅಡಿಕೆ, ಬಾಳೆ, ತೆಂಗು, ತ್ಯಾಗದ ಮರಗಳು ಉರುಳಿ ಬಿದ್ದಿವೆ. ಹಾನಿ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನು ಕೂಡ ಈ ಕುರಿತು ಡಿಸಿ ಜೊತೆ ಚರ್ಚಿಸಿ, ಶೀಘ್ರ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇನೆಂದು ಶಾಸಕ ರಾಮಪ್ಪ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಎಪಿಎಂಸಿ ನಿರ್ದೇಶಕ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಮುಖಂಡರಾದ ಬಿ. ವೀರಯ್ಯ, ಹಕ್ಕೀಂ ಸಾಬ್, ಸೈಯದ್ ಜಾಕೀರ್, ಪುರಸಭೆ ಸದಸ್ಯರಾದ ಎ. ಆರೀಫ್ ಅಲಿ, ದಾದಾವಲಿ, ಮುನೀರ್‌ಸಾಬ್, ಎಂ.ಬಿ. ಫೈಜು, ಫಕೃದ್ದೀನ್, ಕೆ.ಜಿ. ಲೋಕೇಶ್, ಜಿಯಾವುಲ್ಲಾ ಮತ್ತು ಸೈಯದ್ ಅಬೀದ್ ಅಲಿ, ನನ್ನೆಸಾಬ್, ಪಿ.ಬಿ. ದೇವರಾಜ್, ಭೋವಿ ಸುರೇಶ್, ಗಜೇಂದ್ರ, ಪಿ.ಎಸ್. ಹಾಲೇಶ್, ಕುಂಬಳೂರು ವಾಸು, ಕೊಟ್ರೇಶ್ ನಾಯ್ಕ ಈ ವೇಳೆ ಹಾಜರಿದ್ದರು.

error: Content is protected !!