ಮಲೇಬೆನ್ನೂರು, ಮೇ 18- ಸೋಮವಾರ ಬೆಳಗಿನ ಜಾವ ಸುರಿದ ಬಿರುಗಾಳಿ ಸಹಿತ ಮಳೆಗೆ ಮಲೇಬೆನ್ನೂರು ಹೋಬಳಿಯಲ್ಲಿ ಮತ್ತೆ ಭತ್ತ, ಅಡಿಕೆ, ಬಾಳೆ ಬೆಳೆಗಳಿಗೆ ಹಾನಿಯಾಗಿದ್ದು, ಅಪಾರ ನಷ್ಟ ಆಗಿದೆ.
ಧೂಳೆಹೊಳೆಯಲ್ಲಿ 10 ಎಕರೆ, ಬಿಳಸನೂರಿನಲ್ಲಿ 8 ಎಕರೆ, ಕುಂಬಳೂರಿ ನಲ್ಲಿ 50 ಎಕರೆ, ಆದಾಪುರದಲ್ಲಿ 20 ಎಕರೆ, ಜಿಗಳಿಯಲ್ಲಿ 25 ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ಜಿ.ಟಿ.ಕಟ್ಟೆ ಗ್ರಾಮದಲ್ಲಿ ರೇವ ಣಸಿದ್ದಯ್ಯ ಅವರ 3 ಎಕರೆ ಬಾಳೆ ತೋಟ ಮಳೆ, ಗಾಳಿ ಹೊಡೆತಕ್ಕೆ ನೆಲಕ್ಕುರುಳಿದ್ದು, ಬಾಳೆ ಹಣ್ಣಿನ ಗೊನೆಗಳು ಮುರಿದು ಬಿದ್ದಿವೆ.
ಬೆಳೆ ಹಾನಿ ಸ್ಥಳಗಳಿಗೆ ಉಪತಹಶೀ ಲ್ದಾರ್ ರವಿ, ಕಂದಾಯ ನಿರೀಕ್ಷಕ ಸಮೀರ್ ಭೇಟಿ ನೀಡಿ ಪರಿಶೀಲಿಸಿದರು. ಬೆಳೆ ಹಾನಿ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಉಪತಹಶೀ ಲ್ದಾರ್ ರವಿ ತಿಳಿಸಿದರು.
ಕಳೆದ ವಾರವೂ ಗಾಳಿ, ಮಳೆಗೆ ಕುಂಬಳೂರು, ನಿಟ್ಟೂರು, ಆದಾಪುರ, ಮಲೇಬೆನ್ನೂರಿ ನಲ್ಲಿ ನೂರಾರು ಎಕರೆ ಭತ್ತದ ಬೆಳೆ ಸೇರಿ ಅಡಿಕೆ, ತೆಂಗು, ಬಾಳೆ ತೋಟಗಳಿಗೆ ಹಾನಿ ಆಗಿತ್ತು.