ಹರಪನಹಳ್ಳಿ, ಮೇ 17- ಪಟ್ಟಣದ ಓರ್ವ ವ್ಯಕ್ತಿ ಕೊರೊನಾ ವೈರಸ್‍ಗೆ ತುತ್ತಾಗಿದ್ದನ್ನು ಮನಗಂಡು, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆಯಿಂದ ತಾಲ್ಲೂಕಿನ ಗಡಿಯೊಳಗೆ ಪ್ರವೇಶ ಮಾಡದಂತೆ ಎಚ್ಚರಿಕೆ ವಹಿಸಿ ಬಳ್ಳಾರಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಪ್ರಾರಂಭಿಸಿರುವುದು ಶ್ಲಾಘನೀಯ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ಪೊಲೀಸ್ ಸಿಬ್ಬಂದಿಗೆ ಶನಿವಾರ ಹೂ ಮಳೆಯ ಅಭಿನಂದನೆ ಸಲ್ಲಿಸಿ, ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿ ಅವರು ಮಾತನಾಡಿದರು.
ಕೊರೊನಾ ವೈರಸ್ ತಾಲ್ಲೂಕಿನಲ್ಲಿ ಕಾಲಿಡಲು ಆಸ್ಪದ ನೀಡದೇ ಶ್ರಮ ವಹಿಸುತ್ತಿರುವ ಪೊಲೀಸ್, ಆಶಾ, ಹೋಂ ಗಾರ್ಡ್, ಆರೋಗ್ಯ, ಕಂದಾಯ ಇಲಾಖೆಗಳು ಅಭಿನಂದನಾರ್ಹ. ವೈರಸ್ ದಾಳಿಗೆ ಬಲಿಯಾಗಿರುವ ಈ ವ್ಯಕ್ತಿಯ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಿದ್ದ ಪೊಲೀಸ್ ಸಿಬ್ಬಂದಿ ಅಹ್ಮದಾಬಾದ್‍ನಿಂದ ಬಂದ ಇವರನ್ನು ತಾಲ್ಲೂಕಿನ ಗಡಿ ನುಸುಳುವ ಮುನ್ನವೇ ಸುಳಿವು ಪಡೆದು ಕಂದಾಯ ಇಲಾಖೆಯ ಸಹಕಾರದೊಂದಿಗೆ ನೇರವಾಗಿ ಹಡಗಲಿ ಚೆಕ್‌ಪೋಸ್ಟ್‌ನಿಂದ ಬಳ್ಳಾರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಇದರಿಂದ ತಾಲ್ಲೂಕಿಗೆ ಪಸರಿಸಲಿದ್ದ ವೈರಸ್ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸಿಸಿದರು.
ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಸಿಪಿಐ ಕೆ.ಕುಮಾರ್ ಮಾರ್ಗದರ್ಶನದಂತೆ ಪಿಎಸ್‍ಐ ಕೆ.ಪ್ರಕಾಶ್ ಅವರು ಹರಪನಹಳ್ಳಿಯಿಂದ ಅನ್ಯರಾಜ್ಯಗಳಿಗೆ ಹೋದವರ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಗುಜರಾತ್‍ಗೆ ತೆರಳಿದ್ದ ಅಗಸನಕಟ್ಟೆಯ ಮೂವರ ಜೊತೆಗೆ ಅವರು ದೂರವಾಣಿಯ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಜೊತೆಗೆ ಈ ಮೂವರ ಬರುವಿಕೆಯ ಬಗ್ಗೆ ಆಗಾಗ್ಗೆ ವಿಚಾರಿಸುತ್ತಲೇ ಇದ್ದರು.
ಲಾಕ್‍ಡೌನ್ ಸಡಿಲಗೊಂಡ ನಂತರ ಮೈಸೂರಿನಿಂದ ಗುಜರಾತ್‍ಗೆ ತೆರಳಿದ್ದ ಟ್ರಾವೆಲ್ಸ್‍ನಲ್ಲಿ ಬರುವುದಾಗಿ ಮತ್ತು ಗದಗ ಜಿಲ್ಲೆಯ 9 ಜನರು ಜೊತೆಯಲ್ಲಿರುವುದರಿಂದ ಅವರನ್ನು ಡ್ರಾಪ್ ಮಾಡಿ, ಹೂವಿನ ಹಡಗಲಿಯ ಮೂಲಕ ಹರಪನಹಳ್ಳಿಗೆ ಪ್ರವೇಶಿಸುವುದಾಗಿ ಪೊಲೀಸರಿಗೆ ಮೂರು ದಿನಗಳ ಹಿಂದೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಡರಾತ್ರಿಯೇ ಹರಪನಹಳ್ಳಿ ಪಿಎಸ್‍ಐ ಸಿ.ಪ್ರಕಾಶ್ ಅವರು ತಮ್ಮ ಮೇಲಾಧಿಕಾರಿಗಳಿಗೆ ಹಾಗೂ ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್, ತಹಶೀಲ್ದಾರ್ ಡಾ.ನಾಗವೇಣಿ ಅವರ ಗಮನಕ್ಕೆ ತಂದಿದ್ದರು.
ಗದಗ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಪ್ರವೇಶಿಸುವ ಹೂವಿನಹಡಗಲಿ ತಾಲ್ಲೂಕಿನ ಮದಲಗಟ್ಟ ಚೆಕ್‌ಪೋಸ್ಟ್ ಬಳಿ ಅವರನ್ನು ವಶಕ್ಕೆ ಪಡೆಯುವಂತೆ ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್ ಅವರ ಸೂಚನೆ ಮೇರೆಗೆ ಹಡಗಲಿ ಪೊಲೀಸ್ ಠಾಣೆಯ ಪಿಎಸ್‍ಐ ಎಸ್.ಪಿ.ನಾಯ್ಕ್ ಅವರ ನೇತೃತ್ವದ ತಂಡ ಕೊರೊನಾ ಸೋಂಕಿತ ವ್ಯಕ್ತಿ ಹಾಗೂ ಆತನ ಜೊತೆಗಿದ್ದ ಇಬ್ಬರನ್ನು ತಡೆದು ಬಳ್ಳಾರಿಯ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಮುಖಂಡ ರವಿನಾಯ್ಕ್ ಮಾಸ್ಕ್, ಸ್ಯಾನಿಟೈಸರ್ ದೇಣಿಗೆ ನೀಡಿದರು. ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಸಿಪಿಐ ಕೆ.ಕುಮಾರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜಾನಾಯ್ಕ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ ಬಿಜೆಪಿ ಎಸ್.ಟಿ. ಘಟಕದ ತಾಲ್ಲೂಕು ಅಧ್ಯಕ್ಷ ಆರ್.ಲೋಕೇಶ್, ಬಾಗಳಿ ಕೊಟ್ರೇಶಪ್ಪ, ಮುಖಂಡರಾದ ಎಂ.ಪಿ.ನಾಯ್ಕ್, ಕರೇಗೌಡ, ಯಡಿಹಳ್ಳಿ ಶೇಖರಪ್ಪ, ರಾಘವೇಂದ್ರ ಶೆಟ್ಟಿ, ಯು.ಪಿ.ನಾಗರಾಜ್ ಮುಖಂಡರಾದ ಎಂ.ಪಿ.ನಾಯ್ಕ್, ಸಣ್ಣಹಾಲಪ್ಪ, ಲೋಕೇಶ್, ಬಾಗಳಿ ಕೊಟ್ರೇಶ್, ನಾಗರಾಜ ಜೈನ್, ಸಂತೋಷ್, ಕರೇಗೌಡ, ಮಲ್ಲೇಶ್, ರಾಘವೇಂದ್ರಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ದೊಡ್ಮನಿ, ಸಿಪಿಐ ಕೆ.ಕುಮಾರ್ ಮಾರ್ಗದರ್ಶನದಂತೆ ಪಿಎಸ್‍ಐ ಕೆ. ಪ್ರಕಾಶ್ ಅವರು ಹರಪನಹಳ್ಳಿಯಿಂದ ಅನ್ಯರಾಜ್ಯಗಳಿಗೆ ಹೋದವರ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಗುಜರಾತ್‍ಗೆ ತೆರಳಿದ್ದ ಅಗಸನಕಟ್ಟೆಯ ಮೂವರ ಜೊತೆಗೆ ದೂರವಾಣಿಯ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಜೊತೆಗೆ ಈ ಮೂವರ ಬರುವಿಕೆಯ ಬಗ್ಗೆ ಆಗಾಗ್ಗೆ ವಿಚಾರಿಸುತ್ತಲೇ ಇದ್ದರು.
ಲಾಕ್‍ಡೌನ್ ಸಡಿಲಗೊಂಡ ನಂತರ ಮೈಸೂರಿನಿಂದ ಗುಜರಾತ್‍ಗೆ ತೆರಳಿದ್ದ ಟ್ರಾವೆ ಲ್ಸ್‍ನಲ್ಲಿ ಬರುವುದಾಗಿ ಮತ್ತು ಗದಗ ಜಿಲ್ಲೆಯ 9 ಜನರು ಜೊತೆಯಲ್ಲಿರುವುದರಿಂದ ಅವರನ್ನು ಡ್ರಾಪ್ ಮಾಡಿ, ಹೂವಿನ ಹಡಗಲಿಯ ಮೂಲಕ ಹರಪನಹಳ್ಳಿಗೆ ಪ್ರವೇಶಿಸುವುದಾಗಿ ಪೊಲೀಸರಿಗೆ ಮೂರು ದಿನಗಳ ಹಿಂದೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಡರಾತ್ರಿಯೇ ಹರಪನಹಳ್ಳಿ ಪಿಎಸ್‍ಐ ಸಿ.ಪ್ರಕಾಶ್ ಅವರು ತಮ್ಮ ಮೇಲಾಧಿ ಕಾರಿಗಳಿಗೆ ಹಾಗೂ ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್, ತಹಶೀಲ್ದಾರ್ ಡಾ.ನಾಗವೇಣಿ ಅವರ ಗಮನಕ್ಕೆ ತಂದಿದ್ದರು.
ಗದಗ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಪ್ರವೇಶಿಸುವ ಹೂವಿನಹಡಗಲಿ ತಾಲ್ಲೂಕಿನ ಮದಲಗಟ್ಟ ಚೆಕ್‌ಪೋಸ್ಟ್ ಬಳಿ ಅವರನ್ನು ವಶಕ್ಕೆ ಪಡೆಯುವಂತೆ ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್ ಅವರ ಸೂಚನೆ ಮೇರೆಗೆ ಹಡಗಲಿ ಪೊಲೀಸ್ ಠಾಣೆಯ ಪಿಎಸ್‍ಐ ಎಸ್.ಪಿ.ನಾಯ್ಕ್ ಅವರ ನೇತೃತ್ವದ ತಂಡ ಕೊರೊನಾ ಸೋಂಕಿತ ವ್ಯಕ್ತಿ ಹಾಗೂ ಆತನ ಜೊತೆಗಿದ್ದ ಇಬ್ಬರನ್ನು ತಡೆದು ಬಳ್ಳಾರಿಯ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಮುಖಂಡ ರವಿನಾಯ್ಕ್ ಮಾಸ್ಕ್, ಸ್ಯಾನಿಟೈಸರ್ ದೇಣಿಗೆ ನೀಡಿದರು. ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಸಿಪಿಐ ಕೆ.ಕುಮಾರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜಾನಾಯ್ಕ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಬಿಜೆಪಿ ಎಸ್.ಟಿ. ಘಟಕದ ತಾಲ್ಲೂಕು ಅಧ್ಯಕ್ಷ ಆರ್.ಲೋಕೇಶ್, ಬಾಗಳಿ ಕೊಟ್ರೇಶಪ್ಪ, ಮುಖಂಡರಾದ ಎಂ.ಪಿ.ನಾಯ್ಕ್, ಕರೇಗೌಡ, ಯಡಿಹಳ್ಳಿ ಶೇಖರಪ್ಪ, ರಾಘವೇಂದ್ರ ಶೆಟ್ಟಿ, ಯು.ಪಿ.ನಾಗರಾಜ್ ಮುಖಂಡರಾದ ಎಂ.ಪಿ.ನಾಯ್ಕ್, ಸಣ್ಣಹಾಲಪ್ಪ, ಲೋಕೇಶ್, ಬಾಗಳಿ ಕೊಟ್ರೇಶ್, ನಾಗರಾಜ ಜೈನ್, ಸಂತೋಷ್, ಕರೇಗೌಡ, ಮಲ್ಲೇಶ್, ರಾಘವೇಂ ದ್ರಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
November 22, 2024