ಹರಪನಹಳ್ಳಿ : ಕೋವಿಡ್ ಮುಂಜಾಗ್ರತಾ ಸಭೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್
ಹರಪನಹಳ್ಳಿ, ಮೇ 13- ದಾವಣಗೆರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ದಾವಣಗೆರೆ ಭಾಗದಿಂದ ಸಂಪರ್ಕ ಕಲ್ಪಿ ಸುವ ಚೆಕ್ ಪೋಸ್ಟ್‌ಗಳಲ್ಲಿ ಹೆಚ್ಚಿನ ಬಿಗಿ ಭದ್ರತೆ ಹಾಗೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಪೊಲೀಸ್ ಹಾಗೂ ಉಪವಿಭಾಗಾಧಿ ಕಾರಿಯವರಿಗೆ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಕೋವಿಡ್-19 ಮುಂಜಾಗೃತಾ ಕ್ರಮವಾಗಿ ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟೂರು ತಾಲ್ಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳ ಕೋವಿಡ್ ಮುಂಜಾಗೃತಾ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕೊಟ್ಟೂರು, ಹಡಗಲಿ, ಹರಪನಹಳ್ಳಿ ಗಡಿ ಭಾಗಗಳಲ್ಲಿ ಅಪರಿಚಿತರನ್ನು ಬಳ್ಳಾರಿ ಗಡಿಯ ಒಳಗಡೆ ಬಿಡಬೇಡಿ. ಅಂತಹವರನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸಿ. ಆಯಾ ತಾಲ್ಲೂಕುಗಳಲ್ಲಿನ ಸಾರ್ವಜನಿಕ ಆಸ್ವತ್ರೆಗಳಲ್ಲಿ ಚಿಕಿತ್ಸೆಗೆ ನೆರ ವಾಗುವ ರೀತಿಯಲ್ಲಿ ಅನುದಾನ ಬಳಸಿಕೊಂಡು ಅಪ್‌ಗ್ರೇಡ್ ಮಾಡಿಕೊಳ್ಳಿ. ಆಸ್ಪತ್ರೆಗೆ ಬಂದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತೆ ಸೂಚನೆ ನೀಡುತ್ತೀರಿ ಎಂಬ ಮಾಹಿತಿ ಬಂದಿದ್ದು, ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀವೇ ನೀಡಬೇಕು ಎಂದರು.
ಗ್ರಾಮ, ಪಟ್ಟಣಗಳಲ್ಲಿ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಮುಂಜಾಗ್ರತೆ ವಹಿಸಬೇಕು. ಆಯಾ ಗ್ರಾಮ ಪಂಚಾಯಿತಿಯವರು ಟ್ಯಾಂಕರ್ ಮೂಲಕ ನೀರು ಹಾಕಿದರೆ, ಆಯಾ ತಾಲ್ಲೂಕಿನ ಚೆಕ್‌ಪೋಸ್ಟ್‌ಗಳಲ್ಲಿ ಮಾಡಿದ ಖರ್ಚು-ವೆಚ್ಚಗಳಿಗೆ, ಪ್ರತಿ ತಿಂಗಳು 21 ರೊಳಗೆ ಹಣ ಪಾವತಿಸಿ ಎಂದು ಸೂಚನೆ ನೀಡಿದರು.
ನಕಲಿ ವೈದ್ಯರ ಕುರಿತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಯಾರ ಮುಲಾಜಿಗೂ ಒಳಗಾಗ ಬೇಡಿ, ಯಾರಾದಾರು ಕೇಳಿದರೆ ನನ್ನ ಹೆಸರೇಳಿ ಕ್ರಮ ಕೈಗೊಳ್ಳಿ ಎಂದ ಅವರು, ಹೂವಿನ ಹಡಗ ಲಿಯಲ್ಲಿ ಇರುವ ನಕಲಿ ವೈದ್ಯರೊಬ್ಬರ ಮೇಲೆ ಪ್ರಕರಣ ದಾಖಲಿಸಿ ಎಂದು ಅಲ್ಲಿಯ ತಹಶೀ ಲ್ದಾರ್ ವಿಜಯಕುಮಾರ್ ಅವರಿಗೆ ಸೂಚಿಸಿದರು.
ಕೊರೊನಾ ನಡುವೆ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಿ ಎಂದು ಅವರು ಮೂರು ತಾಲ್ಲೂಕುಗಳ ತಾ.ಪಂ. ಇಒ ಗಳಿಗೆ ಸೂಚಿಸಿದರು.
ಕೋವಿಡ್ -19 ಮೇಲುಸ್ತುವಾರಿ ಅಧಿಕಾರಿ ಪಿ.ಎನ್.ಲೋಕೇಶ್ ಮಾತನಾಡಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ ಒಳಗೊಂಡಂತೆ ಕೂಡಲೇ ಮನೆ-ಮನೆ ಸರ್ವೇ ಕಾರ್ಯ ಆರಂಭಿಸಲು ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ದನ್, ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ತಹಶೀಲ್ದಾರ್ ಡಾ.ನಾಗವೇಣಿ, ಕೊಟ್ಟೂರು ತಹಶೀಲ್ದಾರ್ ಜಿ.ಅನಿಲ್‌ಕುಮಾರ್, ಹಡಗಲಿ ತಹಶೀಲ್ದಾರ್ ಕೆ.ವಿಜಯಕುಮಾರ್, ಹರಪನಹಳ್ಳಿ ಸಿ.ಪಿ.ಐ. ಕೆ.ಕುಮಾರ್, ಕೊಟ್ಟೂರು ಸಿ.ಪಿ.ಐ. ರವೀಂದ್ರ ಎಂ.ಕುರಬಗಟ್ಟಿ, ಹಡಗಲಿ ಸಿ.ಪಿ.ಐ. ಮಾಲತೇಶ್, ಹರಪನಹಳ್ಳಿ ಇ.ಓ. ಅನಂತರಾಜು, ಕೊಟ್ಟೂರು ಇ.ಓ.ಬಸಣ್ಣ, ಹಡಗಲಿ ಇ.ಓ ಸೋಮಶೇಖರ್, ಹರಪನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಬಿ.ಆರ್.ನಾಗರಾಜ್ ನಾಯ್ಕ, ಕೊಟ್ಟೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೆಚ್.ಎಫ್.ಬಿದರಿ, ಹಡಗಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಬಿ. ವೀರಣ್ಣ ಹಾಗೂ ಮೂರು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.