ಬಸವರಾಜು ಶಿವಗಂಗಾ ಅವರಿಂದ ಚನ್ನಗಿರಿ ತಾಲ್ಲೂಕಿನಲ್ಲಿ ಕಿಟ್‌ಗಳ ವಿತರಣೆ

ಚನ್ನಗಿರಿಯ ಮನೆ ಮಗ ನಾನು; ನಿಮ್ಮ ಋಣ ತೀರಿಸುವೆ : ಬಸವರಾಜು ವಿ. ಶಿವಗಂಗಾ

ಚನ್ನಗಿರಿ, ಮೇ 4- ಜಿಲ್ಲಾ ಕಾಂಗ್ರೆಸ್ ಕಿಸಾನ್ ಮೋರ್ಚಾ ದಿಂದ ಬಡವರಿಗೆ ಆಹಾರ ಧಾನ್ಯದ ಕಿಟ್ ನೀಡುವ ಕಾರ್ಯ ನಿರಂತ ರವಾಗಿ ನಡೆಯುತ್ತಿದೆ ಎಂದು ಮೋರ್ಚಾದ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ ತಿಳಿಸಿದ್ದಾರೆ.
ತಾಲ್ಲೂಕಿನ ನಲ್ಲೂರು ಗ್ರಾಮ ದಲ್ಲಿ 2 ಸಾವಿರ ಮಂದಿ ಬಡವರು, ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿದರು. ಸರ್ಕಾರಿ ಶಾಲೆ ಹಾಗೂ ಉರ್ದು ಸರ್ಕಾರಿ ಶಾಲೆಗಳ ಆವರಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕುರ್ಚಿ ವ್ಯವಸ್ಥೆ ಕಲ್ಪಿಸಿ, ಆಹಾರ ಧಾನ್ಯದ ಕಿಟ್ ನೀಡಲಾಯಿತು.


ಕೊರೊನಾ ಹಿನ್ನೆಲೆಯಲ್ಲಿ ಕೆಲ ಸವಿಲ್ಲದೆ   ಮನೆಯಲ್ಲೇ ಇದ್ದ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಈಗಾಗಲೇ ಹಲವೆಡೆ ಆಹಾರ ಧಾನ್ಯದ ಕಿಟ್ ನೀಡಿದ್ದು, ಇಂದು ನಲ್ಲೂರು ಗ್ರಾಮದಲ್ಲಿ ಅವರು ಆಹಾರ ಧಾನ್ಯ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾ ಡಿದ ಬಸವರಾಜು  ಶಿವಗಂಗಾ ಅವರು, ನಾನು ಕೋಗಲೂರು ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದು, ಇದೇ ತಾಲ್ಲೂಕಿನ ಮನೆ ಮಗ. ಕ್ಷೇತ್ರದ ಋಣ ತೀರಿಸುವ ಅವಕಾಶ ಸಿಕ್ಕಿದೆ. ನಾನು ನಿಮ್ಮ ಸೇವೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ಆಶಾ ಕಾರ್ಯ ಕರ್ತರನ್ನು ಸನ್ಮಾನಿಸಿ ಗೌರವಿಸಲಾ ಯಿತು. ರೈತರ ಮಗನಾಗಿ ಅವರ ಸೇವೆಯನ್ನೂ ಮಾಡುತ್ತಿರುವೆ, ಕಾಂಗ್ರೆಸ್  ಕಿಸಾನ್ ಅಧ್ಯಕ್ಷನಾಗಿದ್ದು, ಅಳಿಲು ಸೇವೆ ಮಾಡುವೆ. ಜಿಲ್ಲೆಯ ರೈತರು ಯಾವ ಸಮಸ್ಯೆ ಬಂದರೂ ನನ್ನ ಸಂಪರ್ಕ ಮಾಡಿ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಸೂಕ್ತವಾಗಿ ರೈತರಿಗೆ ಸಿಗುವಂತೆ ವ್ಯವಸ್ಥೆ ಮಾಡಲು ಪ್ರಯತ್ನಿಸುವೆ ಎಂದು ಬಸವರಾಜು ಭರವಸೆ ನೀಡಿದರು. ಇನ್ನು ಭದ್ರಾ ನೀರನ್ನು ಕಾಲುವೆಗ ಳಿಗೆ ಹರಿಸುವ ಕುರಿತಂತೆ ಅಧಿಕಾರಿ ಗಳ ಜೊತೆ ಚರ್ಚೆ ಮಾಡುವೆ, ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದರು.

ಮೆದಿಕೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವಿಜಯ ಕುಮಾರ್,  ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಜಾಕ್, ತಾ.ಪಂ. ಸದಸ್ಯರಾದ ಇಮ್ತಿಯಾಜ್ ಬೇಗ್, ನಿಸಾರ್ ಅಹ್ಮದ್, ಕಾಂಗ್ರೆಸ್ ಮುಖಂಡ ರಾದ ರಾಮಣ್ಣ, ಸೈಫುಲ್ಲಾ, ಪಾಲಾಕ್ಷ  ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!