ಮಲೇಬೆನ್ನೂರು, ಮೇ 13- ಬುಧ ವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಮಲೇಬೆನ್ನೂರು ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಗಳಲ್ಲಿನ ಗಿಡ-ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮಲೇಬೆನ್ನೂರು ಪಟ್ಟಣದ ಬೆಸ್ಕಾಂ ಕಛೇರಿ ಬಳಿ ದೊಡ್ಡ ಮರವೊಂದು ಬಿದ್ದ ಕಾರಣ ವಿದ್ಯುತ್ ಲೈನ್‌ಗಳಿಗೆ ಹಾನಿಯಾ ಗಿದ್ದು, ಪುರಸಭೆ ಪಕ್ಕದಲ್ಲೇ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಆಶ್ರಯ ಕಾಲೋ ನಿಯಲ್ಲಿ 5-6 ಮನೆಗಳ ಮೇಲ್ಛಾವ ಣೆಗಳು ಹಾರಿ ಹೋಗಿದ್ದು, ಮಳೆ ನೀರು ಮನೆಯೊಳಗೆ ಸುರಿದ ಪರಿಣಾಮ ಆ ನಿವಾಸಿಗಳು ರಾತ್ರಿಯಿಡೀ ತೊಂದರೆ ಅನುಭವಿಸಿದರು. ಸಂತೆ ರಸ್ತೆಯಲ್ಲೂ ಪುರಸಭೆ ಸದಸ್ಯ ಬಿ. ಸುರೇಶ್ ಅವರ ಮಳಿಗೆಗಳ ಮೇಲ್ಛಾವಣೆ ಮುರಿದು ಬಿದ್ದಿದೆ. ಪುರಸಭೆ ಮುಖ್ಯಾಧಿಕಾರಿ ಧರ ಣೇಂದ್ರಕುಮಾರ್ ಅವರು ಈ ಘಟನಾ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ಕುಂಬಳೂರು: ಇಲ್ಲಿನ ನಿಟ್ಟೂರು ರಸ್ತೆಯಲ್ಲಿರುವ ಎ.ಕೆ. ಕಾಲೋನಿಯಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಚರಂಡಿ ಸ್ವಚ್ಛಗೊಳಿಸದ ಗ್ರಾ.ಪಂ. ವಿರುದ್ಧ ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.