ಹರಿಹರದಲ್ಲಿ ಲಸಿಕೆ ಕಾರ್ಯ ಚುರುಕು

ಹರಿಹರ, ನ. 30- ಕೊರೊನಾ ನಿಯಂತ್ರಣ ಮಾಡಲು ನಗರದಲ್ಲಿ ಇಂದು ಬಡಾವಣೆಯ ಮನೆ, ಮನೆಗಳಿಗೆ ಹೋಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಹಾಗೂ ನಗರಸಭೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಲಸಿಕೆಯನ್ನು ಹಾಕುವುದಕ್ಕೆ ಮುಂದಾಗಿದ್ದಾರೆ.

ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ, ಇನ್ನೂ ಕೆಲವು ಸಾರ್ವಜನಿಕರು ಲಸಿಕೆಯನ್ನು ಹಾಕಿಸಿಕೊಳ್ಳಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಮನೆಗಳಿಗೆ ತೆರಳಿ ಲಸಿಕೆಯನ್ನು ಹಾಕಿಸುವುದಕ್ಕೆ ಆದೇಶ ಬಂದಿದೆ.

ತಾಲ್ಲೂಕಿನ ಎಲ್ಲಾ ಮನೆಗಳಿಗೆ ಸರ್ಕಾರಿ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಲಸಿಕೆ ಯನ್ನು ಹಾಕಲು ಮುಂದಾಗಿದ್ದು, ಸಾರ್ವಜನಿಕರು ಸಹ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇದರಿಂದಾಗಿ ಶೇ. 100 ರಷ್ಟು ಲಸಿಕೆಯನ್ನು ಹಾಕುವುದಕ್ಕೆ ದಾರಿಯಾಗುತ್ತದೆ ಎಂದು ಹೇಳಿದರು.

ಓಮಿಕ್ರಾನ್ ವೈರಸ್ ತಡೆಗಟ್ಟಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದ್ದು, ಅದು ಭಾರತದ ಮೇಲೆ ಯಾವ ರೀತಿಯ ಪರಿಣಾಮ ಬೀರು ತ್ತದೆ ಎಂದು ಅಧಿಕಾರಿಗಳ ತಂಡವು ಪರಿಶೀಲನೆ ನಡೆಸು ತ್ತಿದೆ. ಸಾರ್ವಜನಿಕರು ಸಹ ಮಾರ್ಗಸೂಚಿ ಪಾಲನೆ ಮಾಡುವುದಕ್ಕೆ ಮುಂದಾದರೆ ಎಂತಹ ಪರಿಸ್ಥಿತಿಯ ನ್ನಾದರೂ ಎದುರಿಸುವ ಸಾಮರ್ಥ್ಯ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆಯ ವಸಂತ್,  ಶಿಕ್ಷಣ ಇಲಾಖೆಯ ಕೆ. ಶಿವಮೂರ್ತಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು,  ಅಂಗನವಾಡಿ ಶಿಕ್ಷಕಿಯರು ಹಾಜರಿದ್ದರು. 

error: Content is protected !!