ದಾವಣಗೆರೆ, ಆ.18- ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಬಿಲ್ಲಳ್ಳಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಆಂಜನೇಯಮೂರ್ತಿ ಅವರುಗಳ ನೇತೃತ್ವದಲ್ಲಿ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ಯೋಧರನ್ನು ಸನ್ಮಾನಿಸುವ ಜೊತೆಗೆ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಇನ್ನರ್‌ವ್ಹೀಲ್ ಕಾರ್ಯದರ್ಶಿ ಶ್ರೀಮತಿ ರತ್ನ ಪಾಟೀಲ್, ರೋಟರಿ ಕಾರ್ಯದರ್ಶಿ ದಯಾನಂದ್, ಇನ್ನರ್‌ವ್ಹೀಲ್ ಕ್ಲಬ್ ಹಿರಿಯ ಸದಸ್ಯರಾದ ನಿರ್ಮಲಾ ಮಹೇಶ್ವರಪ್ಪ, ನಾಗೇಂದ್ರಮ್ಮ ಪರಮೇಶ್ವರಪ್ಪ ಸೇರಿದಂತೆ ಇತರೆ ಸದಸ್ಯರು ಉಪಸ್ಥಿತರಿದ್ದರು.