ದಾವಣಗೆರೆ, ಆ.17- ನಗರದ ಸೇಂಟ್ ಜಾನ್ಸ್ ಶಾಲೆಯಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯ ಕ್ರಮದ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ರವರ ಸೇವೆಯನ್ನು ಸ್ಮರಿಸಿ, ನೇತ್ರಾವತಿ, ಚಂದ್ರಕಲಾ, ಶೃತಿ, ಜ್ಯೋತಿ, ತ್ರಿವೇಣಿ, ಮಿಲನ, ರೇಖಾ, ಸುಹಾಸಿನಿ ಮತ್ತು ಪ್ರಶಾಂತ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಯುವ ಕಾಂಗ್ರೆಸ್ ಮುಖಂಡ ಗಣೇಶ್ ಹುಲ್ಲುಮನೆ ಮತ್ತು ಪಾಲಿಕೆ ಸದಸ್ಯರಾದ ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನೆ ಅವರುಗಳು ಸನ್ಮಾನ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು, ಆಸಕ್ತ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
January 23, 2025