ಶಾಸಕ ರಾಮಪ್ಪ ಆಶಯ
ಬಿ.ಆರ್. ಪ್ರಾಜೆಕ್ಟ್, ಆ.17- ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಮಂಗಳವಾರ ಶಾಸಕ ಎಸ್. ರಾಮಪ್ಪ, ಹರಿಹರ ಕ್ಷೇತ್ರದ ಜನರ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಶಾಸಕರು, ಮಳೆ-ಬೆಳೆ ಸಮೃದ್ಧಿಯಾಗಲಿ. ಭದ್ರೆ ಒಡಲು ಪ್ರತಿ ವರ್ಷ ಭರ್ತಿಯಾಗಲಿ. ರೈತರ ಬದುಕು ಹಸನಾಗಲಿ ಎಂದು ಗಂಗೆಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಶಿವಮೊಗ್ಗ, ದಾವಣಗೆರೆ, ಹಾವೇರಿ, ಬಳ್ಳಾರಿ, ಗದಗ ಜಿಲ್ಲೆಗಳಿಗೆ ವರದಾನವಾಗಿರುವ ಭದ್ರಾ ಜಲಾಶಯದಿಂದಲೇ ಅಪ್ಪರ್ ಭದ್ರಾ ಕಾಲುವೆಗೆ ನೀರು ಹರಿಸುವುದರಿಂದ ಬೇಸಿಗೆ ಸಮಯದಲ್ಲಿ ಅಚ್ಚುಕಟ್ಟಿನ ರೈತರಿಗೆ ತೊಂದರೆ ಆಗಲಿದೆ. ತುಂಗಾ ಜಲಾಶಯದಿಂದಲೇ 29 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಲಿಫ್ಟ್ ಮಾಡುವಂತಾಗಬೇಕು. ತುಂಗಾದಿಂದ ನೀರು
ಭದ್ರಾಕ್ಕೆ ಹರಿದ ನಂತರ ಅಪ್ಪರ್ ಭದ್ರಾ ಕಾಲುವೆಗೆ ನೀರು ಹರಿಸಬೇಕೆಂದು ಶಾಸಕರು ಸರ್ಕಾರವನ್ನು ಒತ್ತಾಯಿಸಿದರು.
ಮಳೆಗಾಲದಲ್ಲಿ ನಮ್ಮ ಡ್ಯಾಂ ತುಂಬಿದ ನಂತರ ಹೆಚ್ಚುವರಿ ನೀರನ್ನು ಅಪ್ಪರ್ ಭದ್ರಾ ಕಾಲುವೆಗೆ ಹರಿಸಲು ನಮ್ಮ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದ ರಾಮಪ್ಪ ಅವರು, ಹರಿಹರ ತಾಲ್ಲೂಕಿನಲ್ಲಿ ಹಾಳಾಗಿರುವ ಭದ್ರಾ ಕಾಲುವೆಗಳನ್ನು ದುರಸ್ತಿ ಮಾಡಿಸಲು ಮತ್ತು ದೇವರ ಬೆಳಕೆರೆ ಪಿಕಪ್ ವ್ಯಾಪ್ತಿಯ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಸಲು ಸರ್ಕಾರ ಕೂಡಲೇ ಅನುದಾನ ನೀಡಬೇಕೆಂದು ಮನವಿ ಮಾಡಿದರು.
ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಭದ್ರಾ ಯೋಜನಾ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಹರಿಹರ ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಪಿ.ಎಸ್. ಹನುಮಂತಪ್ಪ, ಜಿಗಳಿ ಆನಂದಪ್ಪ, ಕಾಂಗ್ರೆಸ್ ಮುಖಂಡರಾದ ಕುಂಬಳೂರು ವಿರೂಪಾಕ್ಷಪ್ಪ, ನಂದಿಗಾವಿ ಶ್ರೀನಿವಾಸ್, ಬಿ. ವೀರಯ್ಯ, ದೇವರ ಬೆಳಕೆರೆ ಮಹೇಶ್ವರಪ್ಪ, ಹಳ್ಳಿಹಾಳ್ ವೀರನಗೌಡ, ವಿವೇಕಾನಂದ ಸ್ವಾಮಿ, ಕೆ.ಪಿ. ಗಂಗಾಧರ್, ಕೊಕ್ಕನೂರಿನ ಡಿ. ಸೋಮಶೇಖರ್, ಟಿ. ರಾಮಚಂದ್ರಪ್ಪ, ಕೆ.ಎನ್. ಹಳ್ಳಿಯ ಗುಬ್ಬಿ ರಂಗನಾಥ್, ಭಾನುವಳ್ಳಿಯ ಟಿ. ಪುಟ್ಟಪ್ಪ, ಹೆಚ್.ಎಸ್. ಕರಿಯಪ್ಪ, ಕಡ್ಲೆಗೊಂದಿ ಹನುಮಂತ ರೆಡ್ಡಿ, ಎ. ಆರೀಫ್ ಅಲಿ, ಭೋವಿ ಕುಮಾರ್, ಬೆಳ್ಳೂಡಿಯ ನರೇಂದ್ರ, ಸಂತೋಷ್, ಸಿರಿಗೆರೆಯ ಪರಶುರಾಮ್, ನಂದಿತಾವರೆ ರೇವಣ ಸಿದ್ದಪ್ಪ, ಕುಣೆಬೆಳಕೆರೆ ರುದ್ರಪ್ಪ, ಹಾಲಿವಾಣದ ಕೆ. ರೇವಣಸಿದ್ದಪ್ಪ, ಸಣ್ಣಪರಮೇಶ್ವರಪ್ಪ, ಮಲ್ಲ ನಾಯ್ಕನಹಳ್ಳಿ ಸಣ್ಣ ಶೇಖರಪ್ಪ, ಕೊಪ್ಪದ ಕಬ್ಬಾರ್ ಚಂದ್ರಪ್ಪ, ವೈ. ಕೃಷ್ಣಪ್ಪ, ಬಿಳಸೂರಿನ ಶಶಿರೆಡ್ಡಿ, ಹರಿಹರದ ವಿದ್ಯಾ, ಯಲವಟ್ಟಿ ಕೊಟ್ರೇಶ್ ನಾಯ್ಕ, ಕುಂಬಳೂರಿನ ಶಂಕರಗೌಡ, ಮಲೇಬೆನ್ನೂರಿನ ಪೂಜಾರ್ ಪರಮೇಶ್ವರಪ್ಪ, ಪಿ.ಹೆಚ್. ಶಿವು, ಮೆಡಿಕಲ್ ಶಾಪ್ ರಾಜು, ಕೊಮಾರನಹಳ್ಳಿಯ ಉದ್ದಣ್ಣರ ಅಣ್ಣೇಶ್ ಇನ್ನಿತರರು ಹಾಜರಿದ್ದರು.