ದಾವಣಗೆರೆ, ಮಾ.19- ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಮಹಾನಗರ ಪಾಲಿಕೆ ವತಿಯಿಂದ ಪ್ರತಿ ಮನೆಗೆ ಭೇಟಿ ನೀಡುವ ಮೂಲಕ ಇಂದು ಚಾಲನೆ ಮಾಡಿದರು.
ಮೊಬೈಲ್ ಮುಖಾಂತರ, ಸೆಂಟರ್ ಫಾರ್-ಇ-ಗವರ್ನೆನ್ಸ್ ಇಲಾಖಾ ವತಿಯಿಂದ ಅಭಿವೃದ್ಧಿಪಡಿ ಸಿರುವ, ಕರ್ನಾಟಕ ಹೆಚ್2ಹೆಚ್. ಮಕ್ಕಳ ಸರ್ವರ್ ಆಪ್ (Karnataka H2H children survey App) ವಿಶಿಷ್ಟವಾದ ಮೊಬೈಲ್ ಆಪ್ ಆಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪಡಿತರ ಚೀಟಿಯ ಡಾಟಾದಿಂದ ಕುಟುಂಬಗಳ ಮಾಹಿತಿಯನ್ನು ಈ ಆ್ಯಪ್‍ನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಪತ್ತೆ ಹಚ್ಚಲು ಎಲ್ಲಾ ಸ್ಥಳೀಯ ಸಂಸ್ಥೆಗಳಿಂದ ಸಮೀಕ್ಷೆ ನಡೆಸುತ್ತಿದ್ದು, ದಾವಣಗೆರೆ ಮಹಾನಗರ ಪಾಲಿಕೆಯಿಂದ ಮನೆ-ಮನೆ ಸರ್ವೆ ಕಾರ್ಯವನ್ನು ಭರದಿಂದ ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ ಹೇಳಿದರು. ನಗರದ ಭಗತ್‍ಸಿಂಗ್ ನಗರ, ಕೆ.ಟಿ.ಜೆ.ನಗರ, ಮೋತಿ ವೀರಪ್ಪ ಬಡಾವಣೆಗಳಲ್ಲಿ ನಡೆಯುತ್ತಿರುವ ಸರ್ವೆ ಕಾರ್ಯದ ವೀಕ್ಷಣೆಗೆ ತೆರಳಿ ಸಾರ್ವಜನಿಕರಿಗೆ ಮನವಿ ಮಾಡಿ ಮನೆಯ ಸದಸ್ಯರ ಮಾಹಿತಿ ನೀಡುವಂತೆ ನಾಗರಿಕರಿಗೆ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಯಿಂದ ಈ ಸರ್ವೆ ಕಾರ್ಯ ಮಾಡುತ್ತಿದ್ದು, ದಾವಣಗೆರೆ ನಗರದಲ್ಲಿ 99077 ಕುಟುಂಬಗಳಿದ್ದು ಈಗಾಗಲೇ 46695 ಮನೆಗಳ ಸರ್ವೆ ಕಾರ್ಯ ಮಾಡಲಾಗಿದೆ. ಸುಮಾರು 52.5 ಕಾರ್ಯ ಮಾಡಲಾಗಿದ್ದು, ನಾಗರಿಕರು ಪಾಲಿಕೆ ಅಧಿಕಾರಿಗಳು ಮನೆಯ ಹತ್ತಿರ ಬಂದಾಗ ಯಾವುದೇ ಸಂಕೋಚವಿಲ್ಲದೆ ಮಾಹಿತಿ ನೀಡಿ ಸಹಕರಿಸಬೇಕೆಂದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ವ್ಯವ ಸ್ಥಾಪಕ ವೆಂಕಟೇಶ್ ಪಿ., ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್, ಬಿಲ್ ಕಲೆಕ್ಟರ್, ಶಶಾಂಕ್, ಆರೋಗ್ಯ ಇಲಾಖೆಯ ಉಷಾ, ವೀರೇಶ್ ಮತ್ತಿತರರು ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.