ದಾವಣಗೆರೆ, ಆ.1- ನಗರದ ರೋಟರಿ ಬಾಲಭವನದಲ್ಲಿ ರೋಟರಿ ಸಂಸ್ಥೆ ದಾವಣಗೆರೆ ದಕ್ಷಿಣ ಮತ್ತು ರೋಟರಾಕ್ಟ್ ಸಂಸ್ಥೆ ದಾವಣಗೆರೆ ದಕ್ಷಿಣ ಸಹಯೋಗದೊಂದಿಗೆ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು.
ರೋಟರಿ ಸಂಸ್ಥೆ ದಾವಣಗೆರೆ ದಕ್ಷಿಣದ ಅಧ್ಯಕ್ಷ ಡಾ. ಎಸ್.ಹೆಚ್. ಸುಜಿತಕುಮಾರ್, ಹೆಚ್.ಜಿ. ಬಸವರಾಜ್, ರೋಟರಾಕ್ಟ್ ಸಂಸ್ಥೆ ದಾವಣಗೆರೆ ದಕ್ಷಿಣದ ಅಧ್ಯಕ್ಷ ಹೆಚ್. ಸದಾನಂದ, ರೋಟರಾಕ್ಟ್ ಸಂಸ್ಥೆ ದಾವಣಗೆರೆ ದಕ್ಷಿಣದ ಕಾರ್ಯದರ್ಶಿ ಹೆಚ್.ಎಂ. ಶ್ರೀಧರ್, ಉಪಾಧ್ಯಕ್ಷ ಎ.ಎ. ಚೇತನಕುಮಾರ್, ಯುವ ಮುಖಂಡರಾದ ಎಸ್.ಹೆಚ್. ಸಾಗರ್, ಶ್ರೀಕಾಂತ್ ಬಗರೆ, ರೋಟರಾಕ್ಟ್ ಸಂಸ್ಥೆಯ ಮಾನಸ, ಮಹಮ್ಮದ್ ಗೌಸ್ ಚರಂತೇಶ ಮತ್ತಿತ್ತರರು ಉಪಸ್ಥಿತರಿದ್ದರು.