ದಾವಣಗೆರೆ, ಜು. 29- ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ, ಅಂತಹವರಿಗೆ ದಿನಸಿ ಕಿಟ್ ವಿತರಿಸುತ್ತಿರುವ ಶಿಂಷಾ ಫೌಂಡೇಷನ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಗುಂಡಾಲ್ ಬಿಜಿನೆಸ್ ಸಲ್ಯೂಷನ್ ಕೇಂದ್ರದಲ್ಲಿ ಶಿಂಷಾ ಫೌಂಡೇಷನ್‍ನಿಂದ ಇಂದು ಆಯೋಜಿಸಿದ್ದ ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಣೆ, ಅವಶ್ಯವಿರುವವರಿಗೆ ಟ್ಯಾಬ್ ವಿತರಿಸಿ ಅವರು ಮಾತನಾಡಿದರು.
ಶಿಂಷಾ ಫೌಂಡೇಷನ್ ಸಂಸ್ಥಾಪಕ ಮಂಜುನಾಥ ಗುಂಡಾಲ್ ಮಾತನಾಡಿ, ತಮ್ಮ ವ್ಯಾಪಾರದಿಂದ ಬರುವ ಹಣವನ್ನು ಸಮಾಜ ಸೇವೆಗೆ ಮೀಸಲಿಟ್ಟು, ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಪ್ರತಿ ವರ್ಷ ಇಬ್ಬರು ಮಕ್ಕಳಂತೆ ಇದುವರೆಗೂ 12 ಮಕ್ಕಳನ್ನು ದತ್ತು ಪಡೆದಿದ್ದು, ಅವರಿಗೆ 1 ರಿಂದ 10ನೇ ತರಗತಿವರೆಗೆ ಶಿಕ್ಷಣ ನೀಡುತ್ತಿದ್ದೇವೆ. ಅನಾಥಾಶ್ರಮ, ವೃದ್ಧಾಶ್ರಮ, ಪ್ರೇರಣಾ ಸಂಸ್ಥೆಯ ಮಕ್ಕಳಿಗೆ ಊಟ, ಫ್ಯಾನ್, ಸ್ಕೂಲ್ ಬ್ಯಾಗ್ ಸೇರಿದಂತೆ ಹಲವಾರು ಉಪಯೋಗಕಾರಿ ವಸ್ತುಗಳನ್ನು ನೀಡುತ್ತಿದ್ದೇವೆ. ಆಯ್ದ 5 ಶಾಲೆಗಳಿಗೆ 10 ಲ್ಯಾಪ್‍ಟಾಪ್, ಬಡವರಿಗೆ 5 ಆಕ್ಸಿಜನ್ ಕಾನ್ಸಂಟ್ರೇಟರ್, ಬಡ ಮಕ್ಕಳಿಗೆ 25 ಟ್ಯಾಬ್‍ಗಳನ್ನು ನೀಡಲಾಗಿದೆ ಎಂದು ವಿವರಿಸಿದರು.